ಸುಶಾಸನ ದಿನ ಆಚರಣೆ

25 Dwd 2
Published on

ಧಾರವಾಡ: ಮಾಜಿ ಪ್ರಧಾನಿ, ಭಾರತರತ್ನ ಅಟಲ ಬಿಹಾರಿ ವಾಜಪೇಯಿ ಜಯಂತಿ ಅಂಗವಾಗಿ ಬಿಜೆಪಿ ಕಾರ್ಯಕರ್ತರಿಂದ ನಗರದಲ್ಲಿ ಸೋಮವಾರ ಸುಶಾಸನ ದಿನ ಆಚರಿಸಲಾಯಿತು.
ಮಾಜಿ ಮೇಯರ್ ಈರೇಶ ಅಂಚಟಗೇರಿ ಮಾತನಾಡಿ, ಉತ್ತಮ ಆಡಳಿತ ಮತ್ತು ಆರ್ಥಿಕ ಸುಧಾರಣೆಗಳ ಯುಗಕ್ಕೆ ನಾಂದಿ ಹಾಡಿದ ದೂರದೃಷ್ಟಿಯ ನಾಯಕ ವಾಜಪೇಯಿ. ದೇಶಕ್ಕೆ ಅಪಾರ ಕೊಡುಗೆ ನೀಡುವ ಮೂಲಕ ಆಗಿನ ಕಾಲದಲ್ಲೇ ವಿಶ್ವನಾಯಕ ಎನಿಸಿಕೊಂಡಿದ್ದರು. ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ತೀರಿದ ಯೋಧರಿಗೆ ಸಕಲ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ ಮಾಡುವ ಕೆಲಸ ಆರಂಭಿಸಿದವರು. ಅವರ ಅವಽಯಲ್ಲಿ ದೇಶಾದ್ಯಂತ ದ್ವಿಪಥ ರಸ್ತೆಗಳು ಶುರುವಾಗಿದ್ದು ಇತಿಹಾಸ. ಆಧುನಿಕ ಭಾರತವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಅವರ ನಾಯಕತ್ವ ಮತ್ತು ರಾಜನೀತಿಗಳು ಅನುಕರಣೀಯ ಎಂದರು.
ಶೇಖರ ಕವಳಿ, ಶ್ರೀಕಾಂತ ಕ್ಯಾತಪ್ಪನವರ, ರಾಜೇಶ್ವರಿ ಅಳಗವಾಡಿ, ಹರೀಶ ಮಣಕವಾಡ, ಬಸವರಾಜ ಬಾಳಗಿ, ಪ್ರಕಾಶ ಯಡಾಳ, ಅಶೋಕ ಶೆಟ್ಟರ, -Àಕ್ಕೀರಗೌಡ ಪಾಟೀಲ ವಾಜಪೇಯಿ ಅಭಿಮಾನಿ ಬಳಗದವರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net