ಡಿಸ್ಕಸ್ ಥ್ರೋನಲ್ಲಿ ಮಿಂಚಿದ ಸೂರ್ಯ

h6-KMCRI Sports 2
Published on

ಹುಬ್ಬಳ್ಳಿ: ಮೂಡಬಿದರಿಯ ಅಳ್ವಾಸ್ ಆರೋಗ್ಯ ವಿಜ್ಞಾನ ಸಂಸ್ಥೆಯ ಸೂರ್ಯ ಪಿ. ಅವರು 32.35 ಮೀಟರ್ ಡಿಸ್ಕಸ್ ಥ್ರೋ ಮಾಡಿ ಪುರುಷರ ವಿಭಾಗದಲ್ಲಿ ಹೊಸ ದಾಖಲೆ ನಿರ್ವಿುಸಿದ್ದಾರೆ. ದಾವಣಗೆರೆಯ ಎಸ್​ಎಸ್​ಐಎಂಎಸ್​ಆರ್​ಸಿಯ ಸಂತೋಷ ಕೃಷ್ಣ ಅವರ 2012-13ನೇ ಸಾಲಿನ 31.98 ಮೀಟರ್ ದಾಖಲೆಯನ್ನು ಮುರಿದ್ದಾರೆ.

ರಾಜೀವಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ (ಆರ್​ಜಿಯುಎಚ್​ಎಸ್) ಹಾಗೂ ಕರ್ನಾಟಕ ವೈದ್ಯಕೀಯ ವಿಜ್ಞಾನ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆ ವತಿಯಿಂದ ನಗರದ ಕೆಎಂಸಿಆರ್​ಐ ಕ್ರೀಡಾಂಗಣದಲ್ಲಿ ಬುಧವಾರ ಅಂತರ ಕಾಲೇಜ್ ಮಟ್ಟದ ವಿವಿಧ ಕ್ರೀಡಾಕೂಟದಲ್ಲಿ ಇದು ದಾಖಲೆಯಾಗಿದೆ.

ದಾವಣಗೆರೆಯ ಎಸ್​ಎಸ್​ಐಎಂಎಸ್​ಆರ್​ಸಿಯ ಮದನ್ 31.50 ಮೀಟರ್ (ದ್ವಿತೀಯ), ಶಿವಮೊಗ್ಗ ಮೆಡಿಕಲ್ ಕಾಲೇಜ್ ದರ್ಶನ ಎನ್.ಎಸ್. 27.61 ಮೀಟರ್ ಎಸೆದು ತೃತೀಯ ಸ್ಥಾನ ಪಡೆದಿದ್ದಾರೆ.

ಪರುಷರ ವಿಭಾಗದ 200 ಮೀಟರ್ ಓಟದಲ್ಲಿ ವಿಜಯಪುರದ ಅಲ್ ಅಮೀನ್ ಮೆಡಿಕಲ್ ಕಾಲೇಜ್​ನ ಮಹೇಂದ್ರ ಚೌಧರಿ (ಪ್ರಥಮ), ಮಂಗಳೂರು ಫಾದರ್ ಮುಲ್ಲರ್ ನರ್ಸಿಂಗ್ ಕಾಲೇಜ್​ನ ಜೆಶ್ ಡಿಸೋಜಾ(ದ್ವಿತೀಯ), ಬೆಂಗಳೂರು ಆಕ್ಸಫರ್ಡ್ ಮೆಡಿಕಲ್ ಕಾಲೇಜ್​ನ ಡಿ. ರಾಜೇಶ (ತೃತೀಯ) ಗೆದ್ದಿದ್ದಾರೆ.

5000 ಮೀಟರ್ ಓಟದಲ್ಲಿ ಮೈಸೂರು ಸರ್ಕಾರಿ ನರ್ಸಿಂಗ್ ಕಾಲೇಜ್​ನ ಬಸವರಾಜ ಡಿಪಿ (ಪ್ರಥಮ), ಇದೇ ಕಾಲೇಜಿನ ಪಿದ್ದಪ್ಪ (ದ್ವಿತೀಯ), ಮೂಲ್ಕಿಯ ಸೇಂಟ್ ಅನ್ನಾಸ್ ನರ್ಸಿಂಗ್ ಕಾಲೇಜ್​ನ ಥಾಮಸ್ ಪೌಲ್ ಒ.ಜೆ. ತೃತೀಯ ಸ್ಥಾನ ಪಡೆದಿದ್ದಾರೆ.

800 ಮೀಟರ್ ಓಟದಲ್ಲಿ ಮೂಲ್ಕಿಯ ಸೇಂಟ್ ಅನ್ನಾಸ್ ನರ್ಸಿಂಗ್ ಕಾಲೇಜ್​ನ ಥಾಮಸ್ ಪೌಲ್ ಒ.ಜೆ. (ಪ್ರಥಮ), ಶಿವಮೊಗ್ಗ ಮೆಡಿಕಲ್ ಕಾಲೇಜ್ ನಿರಂಜನ ರೆಡ್ಡಿ (ದ್ವಿತೀಯ), ಬೆಂಗಳೂರು ಆದಿತ್ಯ ಫಾರ್ಮಸಿ ಮತ್ತು ಶಿಕ್ಷಣ ಕಾಲೇಜ್​ನ ಗಿರಿಧರಗೌಡ ಎಚ್.ವಿ. (ತೃತೀಯ) ಗೆದ್ದಿದ್ದಾರೆ.

ಎತ್ತರ ಜಿಗತದಲ್ಲಿ ಕಾರವಾರ ಮೆಡಿಕಲ್ ಕಾಲೇಜ್​ನ ಮಯೂರ ಎಚ್.ಕೆ. (ಪ್ರಥಮ), ಮಂಗಳೂರು ಫಾದರ್ ಮುಲ್ಲರ್ ಹೋಮಿಯೋಪಥಿ ಮೆಡಿಕಲ್ ಕಾಲೇಜ್​ನ ಶಿತಿಲ್ ಜೋಸೆಫ್(ದ್ವಿತೀಯ), ಮಂಗಳೂರು ಕರ್ನಾಟಕ ಆಯುರ್ವೆದ ಮೆಡಿಕಲ್ ಕಾಲೇಜ್​ನ ಇರ್ಫಾನ್ (ತೃತೀಯ) ವಿಜಯಿಯಾಗಿದ್ದಾರೆ.

ಶಾಟ್​ಪುಟ್​ನಲ್ಲಿ ಮೂಡಬಿದರಿಯ ಅಳ್ವಾಸ್ ಆರೋಗ್ಯ ವಿಜ್ಞಾನ ಸಂಸ್ಥೆಯ ಸೂರ್ಯ ಪಿ. (ಪ್ರಥಮ), ವಿಜಯಪುರ ಬಿಎಲ್​ಡಿಇಎಎಸ್​ನ ಶ್ರೀಕಾಂತ ಪ್ಯಾಟಿ(ದ್ವಿತೀಯ), ಮೈಸೂರು ಮೆಡಿಕಲ್ ಕಾಲೇಜ್​ನ ಗೌತಮ ಎನ್. (ತೃತೀಯ).

ಮಹಿಳೆಯರ ವಿಭಾಗದಲ್ಲಿ 100 ಮೀಟರ್ ಹರ್ಡಲ್ ಓಟದಲ್ಲಿ ಮುರುಡೇಶ್ವರ ಆರ್​ಎನ್​ಎಸ್ ನರ್ಸಿಂಗ್ ಕಾಲೇಜ್​ನ ಅಲ್ಕಾ ಸಾಜಿ (ಪ್ರಥಮ), ಹುಬ್ಬಳ್ಳಿಯ ಕೆಎಂಸಿಆರ್​ಐ ಮಂಗಳಾ ಪಾಟೀಲ (ದ್ವಿತೀಯ), ಗಂಗಾವತಿ ಬಿಬಿಸಿ ನರ್ಸಿಂಗ್ ಕಾಲೇಜ್​ನ ರಕ್ಷಿತಾ ಬೀರಲದಿನ್ನಿ ತೃತೀಯ ಸ್ಥಾನ ಪಡೆದಿದ್ದಾರೆ.

200 ಮೀಟರ್ ಓಟದಲ್ಲಿ ತುಮಕೂರು ಅಶ್ವಿನಿ ಆಯುರ್ವೆದ ಮೆಡಿಕಲ್ ಕಾಲೇಜ್ ಉಷಾರಾಣಿ ಜಿ.ಎಚ್. (ಪ್ರಥಮ), ಮಂಗಳೂರು ಲಕ್ಷ್ಮೀ ನರ್ಸಿಂಗ್ ಕಾಲೇಜ್ ಅಲಿನಾ ಜೇಮ್್ಸ (ದ್ವಿತೀಯ), ಮೂಡಬಿದರಿಯ ಅಳ್ವಾಸ್ ನ್ಯಾಚುರೋಪಥಿ ಆಂಡ್ ಯೋಗಿಕ್ ಸೈನ್ಸ್ ಕಾಲೇಜ್ ಲಕ್ಷ್ಮೀ ವೈಷ್ಣವಿ (ತೃತೀಯ) ಗೆದ್ದಿದ್ದಾರೆ.

4*100 ಮೀಟರ್ ರಿಲೆಯಲ್ಲಿ ಮಂಗಳೂರು ಲಕ್ಷ್ಮೀ ನರ್ಸಿಂಗ್​ಕಾಲೇಜ್​ನ ಅಲಿನಾ ಜೇಮ್್ಸ (ಪ್ರಥಮ), ಬೆಂಗಳೂರು ಸೇಂಟ್ ಜಾನ್ಸ್ ನರ್ಸಿಂಗ್ ಕಾಲೇಜ್​ನ ಅಯೋನಾ ಜೋಶೈ (ದ್ವಿತೀಯ), ಮೂಡಬಿದರಿಯ ಅಳ್ವಾಸ್ ನ್ಯಾಚುರೋಪಥಿ ಆಂಡ್ ಯೋಗಿಕ್ ಸೈನ್ಸ್ ಕಾಲೇಜ್ ಲಕ್ಷ್ಮೀ ವೈಷ್ಣವಿ ತೃತೀಯ ಸ್ಥಾನಪಡೆದಿದ್ದಾರೆ.

5000 ಮೀಟರ್ ಓಟದಲ್ಲಿ ಬಾಗಲಕೋಟೆಯ ಬಿವಿವಿಎಸ್ ಸಜ್ಜಲಶ್ರೀ ನರ್ಸಿಂಗ್ ಕಾಲೇಜ್​ನ ಮಕ್ತಾಯಿ ಜಿ. (ಪ್ರಥಮ), ಇದೇ ಕಾಲೇಜ್​ನ ಅಕ್ಷತಾ (ದ್ವಿತೀಯ), ಮಂಡ್ಯ ಮೆಡಿಕಲ್ ಕಾಲೇಜ್​ನ ನೇಹಾ ಜಾನ್ಸ್ (ತೃತೀಯ) ಗೆದಿದ್ದಾರೆ.

800 ಮೀಟರ್ ಓಟದಲ್ಲಿ ಶಿವಮೊಗ್ಗ ಮೆಡಿಕಲ್ ಕಾಲೇಜ್​ನ ಸಾಕ್ಷಿ ಎಸ್.ಡಿ. (ಪ್ರಥಮ), ಬೆಂಗಳೂರಿನ ಅವಿಷ್ಕಾರ ನರ್ಸಿಂಗ್ ಕಾಲೇಜ್​ನ ಏಂಜಲ್ ಪಿ. ಜಸ್ಟಿನ್ (ದ್ವಿತೀಯ), ಮಂಗಳೂರು ಫಾದರ್ ಮುಲ್ಲರ್ ಹೋಮಿಯೋಪಥಿ ಮೆಡಿಕಲ್ ಕಾಲೇಜ್​ನ ಸುಪ್ರಿಯಾ (ತೃತೀಯ) ವಿಜಯಶಾಲಿಗಳಾಗಿದ್ದಾರೆ.

ಡಿಸ್ಕಸ್ ಥ್ರೋನಲ್ಲಿ ಹಾಸನ ಮೆಡಿಕಲ್ ಕಾಲೇಜ್ ಕೆ.ವಿದ್ಯಾ (ಪ್ರಥಮ), ಉಡುಪಿ ಎಸ್​ಡಿಎಂ ಆಯುರ್ವೆದ ಕಾಲೇಜ್​ನ ಮೇಘನಾ ಜಿ.ಕೆ. (ದ್ವಿತೀಯ), ಬೆಂಗಳೂರು ಸೇಂಟ್ ಜಾನ್ಸ್ ನರ್ಸಿಂಗ್ ಕಾಲೇಜ್​ನ ಫುನ್ಸೊಟಕ್ ಯಾಂಗ್ಜೋಮ್ ತೃತೀಯ ಸ್ಥಾನ ಪಡೆದಿದ್ದಾರೆ.

ಎತ್ತರ ಜಿಗಿತದಲ್ಲಿ ಹುಬ್ಬಳ್ಳಿ ಸಂಜೀವಿನಿ ಮೆಡಿಕಲ್ ಕಾಲೇಜ್ ಸೀಮಾ ಸಾಸಲಟ್ಟಿ (ಪ್ರಥಮ), ಮಂಗಳೂರು ಆಥೆನಾ ನರ್ಸಿಂಗ್ ಕಾಲೇಜ್​ನ ಥೆರೆಸಾ ಮರಿಯಾ ಶಾಜಿ (ದ್ವಿತೀಯ), ಗದಗ ಆರ್​ಎಂಎಸ್​ಎಸ್ ನರ್ಸಿಂಗ್ ಕಾಲೇಜ್ ವಾಣಿಶ್ರೀ ಮತ್ತು ಹುಬ್ಬಳ್ಳಿಯ ಕೆಎಂಸಿಆರ್​ಐ ಮಂಗಳಾ ಪಾಟೀಲ (ತೃತೀಯ) ಗೆದಿದ್ದಾರೆ.

ಶಾಟ್​ಪುಟ್​ನಲ್ಲಿ ಉಡುಪಿ ಎಸ್​ಡಿಎಂ ಆಯುರ್ವೆದ ಕಾಲೇಜ್​ನ ಮೇಘನಾ ಜಿ.ಕೆ. (ಪ್ರಥಮ), ಬೆಂಗಳೂರು ಸೂರ್ಯ ನರ್ಸಿಂಗ್ ಕಾಲೇಜ್​ನ ಅಸೀಮಾ ಸುಸಾನ್ ಕೋಶೈ(ದ್ವಿತೀಯ), ಶಿವಮೊಗ್ಗದ ಮೆಡಿಕಲ್ ಕಾಲೇಜ್​ನ ಸಾಕ್ಷಿ ಎಸ್.ಡಿ. ತೃತೀಯ ಸ್ಥಾನ ಪಡೆದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net