ಪರಿಸರ ರಕ್ಷಣೆಯಿಂದ ಜೀವ ಸಂಕುಲ ಉಳಿವು

3spt3)
ಸೋಮವಾರಪೇಟೆ ತಾಲೂಕಿನ ನೇರುಗಳೆ ಶ್ರೀ ಶಾಂತಲಿಂಗೇಶ್ವರ ದೇವಾಲಯ ಆವರಣದಲ್ಲಿ ಗ್ರಾಮಸ್ಥರು ಸಸಿ ನೆಟ್ಟರು. ವಿನೋದ್, ಶ್ರವಣ್, ಪ್ರಭಾಕರ್, ತಿಮ್ಮಯ್ಯ, ಶೈಲಾ ಇದ್ದರು.
Published on

ಸೋಮವಾರಪೇಟೆ : ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ನೇರುಗಳಲೆ ಶ್ರೀ ಶಾಂತಲಿಂಗೇಶ್ವರ, ಕನ್ನಂಬಾಡಿ ಅಮ್ಮನವರ ದೇವಸ್ಥಾನ ಸಮಿತಿ ಮತ್ತು ಹಿತ್ತಲಮಕ್ಕಿ, ಮೋರಿಕಲ್ಲು ಗ್ರಾಮ ಅರಣ್ಯ ಉಪವಲಯ ವತಿಯಿಂದ ಶ್ರೀ ಶಾಂತಲಿಂಗೇಶ್ವರ ದೇವಾಲಯದಲ್ಲಿ ಪರಿಸರ ಮಾಹಿತಿ ಮತ್ತು ಗಿಡ ನಾಟಿ ಕಾರ್ಯಕ್ರಮ ಶನಿವಾರ ನಡೆಯಿತು.

ನೇರುಗಳಲೆ ಗ್ರಾಮ ಪಂಚಾಯಿತಿ ಅಧ್ಯಕ್ಷ ವಿನೋದ್ ಕುಮಾರ್ ಮಾತನಾಡಿ, ಪರಿಸರ ರಕ್ಷಣೆ ನಮ್ಮೆಲ್ಲರ ಕರ್ತವ್ಯ. ಪರಿಸರ ರಕ್ಷಣೆಯಾದರೆ ಮಾತ್ರ ಜೀವರಾಶಿ ಉಳಿಯಲು ಸಾಧ್ಯ. ಪ್ರತಿಯೊಬ್ಬರು ಗಿಡಗಳನ್ನು ನೆಟ್ಟು ಬೆಳೆಸಬೇಕು. ಪರಿಸರಕ್ಕೆ ಹಾನಿಯಾಗುವ ಕೆಲಸ ಮಾಡಬಾರದು. ಯುವ ಜನಾಂಗ ಪರಿಸರ ರಕ್ಷಣೆಯಲ್ಲಿ ಹೆಚ್ಚಿನ ಆಸಕ್ತಿ ವಹಿಸಬೇಕು. ಶಾಲಾ ಕಾಲೇಜುಗಳಲ್ಲಿ ಪರಿಸರ ರಕ್ಷಣೆಯಂತಹ ಜಾಗೃತಿ ಕಾರ್ಯಾಗಾರಗಳು ನಡೆಯಬೇಕು ಎಂದು ಹೇಳಿದರು.

ಗ್ರಾಮ ಪಂಚಾಯಿತಿ ಸದಸ್ಯ ಅಜಿತ್ ಕುಮಾರ್, ದೇವಾಲಯ ಸಮಿತಿ ಅಧ್ಯಕ್ಷ ಪ್ರಭಾಕರ್, ಕಾರ್ಯದರ್ಶಿ ತಿಮ್ಮಯ್ಯ, ಡಿಆರ್‌ಎಫ್ ಶ್ರವಣ್ ಕುಮಾರ್, ಯೋಜನೆಯ ಮೇಲ್ವಿಚಾರಕ ಹರೀಶ್ ಕುಮಾರ್, ಸೇವಾಪ್ರತಿನಿಧಿ ಶೈಲಾ, ಗ್ರಾಮಸ್ಥರಾದ ವಿನಯ್, ಸಂಭ್ರಮ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net