ಪ್ರಕೃತಿಯಿಂದ ಜೀವಸಂಕುಲ ಉಳಿವು

06 06 2025_BNG_RURAL_PAGE_5B
ನೆಲಮಂಗಲದ ಪವಾಸಿ ಮಂದಿರ ಮುಂಭಾಗದಲ್ಲಿ ಎಂ.ಇ.ಎಸ್​.ಶಾಲೆ ಸಹಯೋಗದಲ್ಲಿ ಗಿಡನೆಡಲಾಯಿತು. ನಗರಸಭೆ ಅಧ್ಯಕ್ಷ ಎನ್​.ಗಣೇಶ್​, ಶಾಲಾ ಆಡಳಿತ ಮಂಡಳಿ ನಿರ್ದೇಶಕ ಪವನ್​ ಗೌಡ, ಮುಖ್ಯಶಿಕ್ಷಕಿ ಜಯಂತಿ ಮಂಜುನಾಥ್​, ಸಹಶಿಕ್ಷಕ ಚನ್ನೇಗೌಡ, ವೀಣಾಕುಮಾರಿ, ಲತಾಶ್ರೀ, ಐಶ್ವರ್ಯ, ಸಿಂಧೂ, ಸುವರ್ಣಮ್ಮ, ಅಕ್ಕಮ್ಮ, ವಿಠಲ್​, ಜ್ಯೋತಿ, ಸಿದ್ದಗಂಗಮ್ಮಉಪಸ್ಥಿತರಿದ್ದರು.
Published on

ನೆಲಮಂಗಲ : ಆರೋಗ್ಯವಂತ ಸಮಾಜ ನಿರ್ಮಾಣವಾಗಬೇಕಾದರೆ ಮಾಲಿನ್ಯ ಮುಕ್ತ ಪರಿಸರದ ಅವಶ್ಯಕತೆಯಿದೆ ಎಂದು ನಗರಸಭೆ ಅಧ್ಯಕ್ಷ ಎನ್​.ಗಣೇಶ್​ ಅಭಿಪ್ರಾಯಪಟ್ಟರು. ನಗರದ ಪವಾಸಿ ಮಂದಿರ ಮುಂಭಾಗದಲ್ಲಿ ಎಂ.ಇ.ಎಸ್​.ಶಾಲೆ ಸಹಯೋಗದಲ್ಲಿ ಆಯೋಜಿಸಿದ್ದ ಗಿಡನೆಡುವ ಹಾಗೂ ಪರಿಸರ ಸಂರಕ್ಷಣೆ ಕುರಿತ ಜನಜಾಗೃತಿ ಜಾಥಾದಲ್ಲಿ ಮಾತನಾಡಿದರು.

ಪ್ರಾಣಿ&ಪಗಳಿಗಷ್ಟೇ ಅಲ್ಲ ಪರಿಸರ ಸಮತೋಲನದಲ್ಲಿ ಪ್ರಮುಖ ಪಾತ್ರವಹಿಸುವ ಗಿಡ, ಮರಗಳನ್ನು ಹೆಚ್ಚು ಬೆಳೆಸಬೇಕಿದೆ. ಮಹಾತ್ಮ ಗಾಂಧೀಜಿ ಅವರ ಮನೆಗೊಂದು ಮರ ಊರಿಗೊಂದು ಸಾಕಾರಗೊಳಿಸುವಲ್ಲಿ ವನ ಪರಿಕಲ್ಪನೆಯನ್ನು ಪ್ರತಿಯೊಬ್ಬರು ಕೈಜೋಡಿಸಬೇಕು. ಪರಿಸರ ಸಂರಕ್ಷಣೆಯಿಂದ ಶುದ್ಧಗಾಳಿ ನೀರು, ಆಹಾರ ದೊರೆತು ಜೀವಸಂಕುಲ ಉಳಿವಿಗೆ ಸಹಕಾರಿಯಾಗಲಿದೆ ಎಂದರು.

ಶಾಲಾ ಕಾರ್ಯದರ್ಶಿ ಕಾಂತರಾಜು ಮಾತನಾಡಿ, ಅಭಿವೃದ್ಧಿಯ ಹೆಸರಿನಲ್ಲಿ ಅರಣ್ಯ ಸಂಪತ್ತು ನಾಶ ಮಾಡುವುದು ಒಳ್ಳೆಯದಲ್ಲ. ಇರುವ ಸಸ್ಯ ಸಂಪತ್ತನ್ನು ಉಳಿಸಿಕೊಂಡು ಉತ್ತಮ ಪರಿಸರ ನಿರ್ಮಾಣ ಮಾಡಬೇಕಾದ ಜವಬ್ದಾರಿ ಪ್ರತಿಯೊಬ್ಬರ ಮೇಲಿದೆ. ದಿನನಿತ್ಯ ವಿವಿಧ ದಿನಾಚರಣೆ ಮಾಡುತ್ತಿರುವ ಸನ್ನಿವೇಶದಲ್ಲಿ ಪರಿಸರದ ದಿನಾಚರಣೆಯ ಮಹತ್ವವನ್ನು ಅರಿತು ಕೊಳ್ಳಬೇಕಿದೆ. ಶಾಲಾಮಕ್ಕಳು ಚಿಕ್ಕಂದಿನಿಂದಲೇ ಪರಿಸರ ಪ್ರೆಯನ್ನು ಬೆಳೆಸಿಕೊಂಡು ಮುಂದಿನ ಪೀಳಿಗೆಗೆ ಉತ್ತಮ ಪರಿಸರವನ್ನು ಕೊಡುಗೆಯಾಗಿ ಕೊಡಬೇಕಿದೆ ಎಂದರು.

ಜಾಗೃತಿ ಜಾಥಾ : ನಗರದ ಮುಖ್ಯ ರಸ್ತೆ, ಸುಭಾಷ್​ನಗರ ಸೇರಿ ಚನ್ನಪ್ಪ ಬಡಾವಣೆವರೆಗೂ ಪರಿಸರ ಜಾಗೃತಿ ಜಾಥಾ ನಡೆಸಲಾಯಿತು. ಶಾಲಾ ವಿದ್ಯಾರ್ಥಿಗಳು ಪರಿಸರ ಉಳಿಸಿ ನಾಡು ಬೆಳಸಿ ಎಂಬ ಶೀರ್ಷಿಕೆಯಡಿ ಕಿರು ನಾಟಕ ಪದರ್ಶನ ಮಾಡಿದರು. ವಿದ್ಯಾರ್ಥಿಗಳು ಸಾಂಸತಿಕ ಕಾರ್ಯಕ್ರಮ ನೆರವೇರಿಸಿಕೊಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net