ಸರ್ಕಾರಿ ಶಾಲೆಗಳ ಉಳಿವು

taggarse
ಸ್ವಯಂಸ್ಫೂರ್ತಿ ಫೌಂಡೇಶನ್ ಸಂಸ್ಥಾಪಕ ಸಿ.ಎಸ್. ನಾಗರಾಜ ಶೆಟ್ಟಿ ಜಡ್ಕಲ್ ಅವರನ್ನು ಶಾಸಕ ಗುರುರಾಜ ಗಂಟಿಹೊಳೆ ಸನ್ಮಾನಿಸಿದರು.
Published on

ವಿಜಯವಾಣಿ ಸುದ್ದಿಜಾಲ ಬೈಂದೂರು

ಸರ್ಕಾರಿ ಶಾಲೆಗಳ ಉಳಿವಿನಲ್ಲಿ ಶಿಕ್ಷಕರು, ಎಸ್‌ಡಿಎಂಸಿ, ಹಳೇ ವಿದ್ಯಾರ್ಥಿಗಳ ಪಾತ್ರ ಮಹತ್ವದ್ದು. ಇಲ್ಲಿ ಕಲಿತ ವಿದ್ಯಾರ್ಥಿಗಳು ಅಭಿಮಾನದಿಂದ ಶಾಲೆಯತ್ತ ಮತ್ತೆ ಹಿಂದಿರುಗಿ ನೋಡಿದರೆ ಶಾಲೆ ಅಭಿವೃದ್ಧಿಗೆ ಶ್ರಮ ವಹಿಸಬೇಕಿಲ್ಲ. ಉತ್ತಮ ಶಿಕ್ಷಣದೊಂದಿಗೆ ಉತ್ತಮ ಆಲೋಚನಾ ಕ್ರಮ ರೂಪಿಸುವ ಶಕ್ತಿ ಸರ್ಕಾರಿ ಶಾಲೆಗಳಲ್ಲಿದೆ ಎಂದು ಶಾಸಕ ಗುರುರಾಜ ಗಂಟಿಹೊಳೆ ಹೇಳಿದರು.

ತಗ್ಗರ್ಸೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಶನಿವಾರ ಬೆಂಗಳೂರಿನ ಸ್ವಯಂಸ್ಫೂರ್ತಿ ಫೌಂಡೇಶನ್ ವತಿಯಿಂದ ಕೊಡುಗೆಯಾಗಿ ನೀಡಿದ ಟೇಬಲ್, ಕುರ್ಚಿ ಸಹಿತ ನಾಲ್ಕು ಕಂಪ್ಯೂಟರ್ ಸೆಟ್, ಬುಕ್‌ರ್ಯಾಕ್, ಆಟದ ಸಾಮಗ್ರಿಗಳನ್ನು ಒಳಗೊಂಡ ಸ್ವಯಂಸ್ಫೂರ್ತಿ ಕೌಶಲ ಕೇಂದ್ರ ಲೋಕಾರ್ಪಣೆಗೊಳಿಸಿ ಮಾತನಾಡಿದರು.

ಸ್ವಯಂಸ್ಫೂರ್ತಿ ಫೌಂಡೇಶನ್ ಸಂಸ್ಥಾಪಕ ಸಿ.ಎಸ್.ನಾಗರಾಜ ಶೆಟ್ಟಿ ಜಡ್ಕಲ್, ಶಾಸಕರನ್ನು ಶಾಲೆ ವತಿಯಿಂದ ಸನ್ಮಾನಿಸಲಾಯಿತು. ರಸಪ್ರಶ್ನೆ ಸ್ಪರ್ಧೆಯ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಎಸ್‌ಡಿಎಂಸಿ ಅಧ್ಯಕ್ಷ ಸುಬ್ರಹ್ಮಣ್ಯ ಪೂಜಾರಿ, ಮಾಜಿ ಅಧ್ಯಕ್ಷ ಪ್ರಭಾಕರ ಗಾಣಿಗ, ಬೈಂದೂರು ರೋಟರಿ ಕ್ಲಬ್ ಅಧ್ಯಕ್ಷ ಮೋಹನ್ ರೇವಣ್ಕರ್, ಕಾರ್ಯದರ್ಶಿ ಸುನೀಲ್ ಎಚ್.ಜಿ., ಅಣ್ಣಪ್ಪ ಗಾಣಿಗ ಮೊದಲಾದವರು ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕಿ ಮುಕ್ತಾ ಪಿ. ಪ್ರಾಸ್ತಾವಿದರು. ಶಿಕ್ಷಕಿಯರಾದ ಮಾಲತಿ ಸ್ವಾಗತಿಸಿದರು. ಸಂಗೀತಾ, ಸಾರಿಕಾ ವಂದಿಸಿದರು.

ಫೌಂಡೇಶನ್ ಮೂಲಕ ಸರ್ಕಾರಿ ಶಾಲೆ, ಅಂಗನವಾಡಿ ಸೇರಿ ಈ ತನಕ ಒಟ್ಟು 22 ಶಾಲೆಗಳಿಗೆ ದೇಣಿಗೆ ನೀಡಲಾಗಿದೆ. ಶಾಸಕರ 300 ಟ್ರೀಸ್ ಪರಿಕಲ್ಪನೆ ಜತೆಗೆ ಸರ್ಕಾರಿ ಶಾಲೆ ಮೇಲಿನ ಅಭಿಮಾನವಿರಿಸಿ ಜತೆಯಾಗುವ ಶಿಕ್ಷಕರು, ಹಳೇ ವಿದ್ಯಾರ್ಥಿಗಳ ಕಾಳಜಿಯೇ ಈ ಸೇವಾ ಕಾರ್ಯದಲ್ಲಿ ಮುಂದುವರಿಯಲು ಪ್ರೇರಣೆ ನೀಡಿದೆ.

ಸಿ.ಎಸ್.ನಾಗರಾಜ ಶೆಟ್ಟಿ ಜಡ್ಕಲ್ ಸ್ವಯಂಸ್ಫೂರ್ತಿ ಫೌಂಡೇಶನ್ ಸಂಸ್ಥಾಪಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net