ರೈತರಿಂದಲೇ ಸಹಕಾರ ಸಂಘಗಳ ಉಳಿವು

13skpp1
ಸಕಲೇಶಪುರ ವ್ಯವಸಾಯೋತ್ಪನ ಸಹಕರ ಸಂಘದ ವಾರ್ಷಿಕ ಸಭೆಯನ್ನು ಶಾಸಕ ಸಿಮೆಂಟ್ ಮಂಜು ಉದ್ಘಾಟಿಸಿದರು. ಶಶಿಕುಮಾರ್, ವಜ್ರಲೋಕೇಶ್, ಲೋಹಿತ್‌ಕೌಡಳ್ಳಿ ಇತರರು ಇದ್ದರು.
Published on

ಸಕಲೇಶಪುರ: ಸಹಕಾರ ಸಂಘಗಳ ಉಳಿವು ರೈತರ ನಡೆಯನ್ನು ಅವಲಂಬಿಸಿದೆ ಎಂದು ಶಾಸಕ ಸಿಮೆಂಟ್ ಮಂಜು ಹೇಳಿದರು.

ಇಲ್ಲಿನ ವ್ಯವಸಾಯೋತ್ಪನ್ನ ಸಹಕಾರ ಸಂಘದಲ್ಲಿ ಬುಧವಾರ ಆಯೋಜಿಸಿದ್ದ ವಾರ್ಷಿಕ ಸಭೆಯಲ್ಲಿ ಮಾತನಾಡಿ, ರೈತರಿಗೆ ಸುಲಭವಾಗಿ ಸಾಲ, ಸೌಲಭ್ಯ ದೊರಕುವುದು ಸಹಕಾರ ಸಂಘಗಳಲ್ಲಿ ಮಾತ್ರ. ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ರೈತರಿಗೆ ಸಾಲ ದೊರೆಯುವುದು ದುಸ್ತರ. ಆದ್ದರಿಂದ, ರೈತರು ಸಹಕಾರ ಸಂಘಗಳೊಂದಿಗೆ ವ್ಯವಹಾರ ನಡೆಸುವ ವೇಳೆ ಶಿಸ್ತು ಅಳವಡಿಸಿಕೊಂಡಾಗ ಮಾತ್ರ ಸಂಘಗಳು ಬೆಳವಣಿಗೆ ಕಾಣಲಿವೆ. ಪಟ್ಟಣದ ವ್ಯವಸಾಯೋತ್ಪನ್ನ ಸಹಕಾರ ಸಂಘ ಜಿಲ್ಲೆಯಲ್ಲೇ ಮುಂಚೂಣಿಯಲ್ಲಿರುವುದು ಹೆಮ್ಮೆಯ ವಿಚಾರ ಎಂದರು.

ಸಂಘದ ಅಧ್ಯಕ್ಷ ಕಿರುವಾಲೆ ಶಶಿಕುಮಾರ್ ಮಾತನಾಡಿ, ಸಂಘ ಪ್ರಸಕ್ತ ವರ್ಷ 7.79 ಕೋಟಿ ರೂ. ಮೊತ್ತದ ರಸಗೊಬ್ಬರ, ಕ್ರಿಮಿನಾಶಕ ಮಾರಾಟ ಮಾಡುವ ಮೂಲಕ ದಾಖಲೆ ಬರೆದಿದ್ದು, 15.94 ಲಕ್ಷ ಲಾಭಗಳಿಸಿದ್ದು, 8.40 ಕೋಟಿ ರೂ. ವ್ಯವಹಾರ ನಡೆಸಿದೆ ಎಂದರು.

ಉಪಾಧ್ಯಕ್ಷ ವಜ್ರಲೋಕೇಶ್, ನಿರ್ದೇಶಕರಾದ ಸಹನಾ, ಲೋಹಿತ್‌ಕೌಡಳ್ಳಿ, ರವಿಕುಮಾರ್, ಉಮೇಶ್,ದೇವರಾಜ್, ರಾಮಚಂದ್ರ, ಗುರುಲಿಂಗಪ್ಪ, ಕಾರ್ಯನಿರ್ವಹಣಾಧಿಕಾರಿ ಲೋಕೇಶ್ ಮುಂತಾದವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net