ಸಮೀಕ್ಷೆಗಳಲ್ಲಿ ಕಾಂಗ್ರೆಸ್‌ಗೆ ಹಿನ್ನಡೆ, ಸಚಿವ ಜೋಶಿ ಹೇಳಿಕೆ

IMG-20240416-WA0039_1-1.jpg
Published on

ಹುಬ್ಬಳ್ಳಿ: ಲೋಕಸಭೆ ಚುನಾವಣೆ ಕುರಿತು ದೇಶದಲ್ಲಿ ನಡೆದ ಬಹುತೇಕ ಎಲ್ಲ ಸಮೀಕ್ಷೆಗಳಲ್ಲಿ ಕಾಂಗ್ರೆಸ್ಗೆ ಹಿನ್ನಡೆಯಾಗಿದೆ. ಹೀಗಾಗಿ ಹತಾಶಗೊಂಡು ಕೀಳುಮಟ್ಟದ ರಾಜಕಾರಣದಲ್ಲಿ ತೊಡಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಟೀಕಿಸಿದರು.

ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ಗೆ ಸಮೀಕ್ಷೆಗಳಲ್ಲಿ ಎರಡು- ಮೂರು ಸೀಟ್ ಗೆದ್ರೆ ಅದೇ ಜಾಸ್ತಿ ಎಂಬ ಅಭಿಪ್ರಾಯ ಬಂದಿದೆ. ಇದರಿಂದ ಹತಾಶರಾಗಿ ಕಾಂಗ್ರೆಸ್ ನಾಯಕರು ಇಲ್ಲಸಲ್ಲದ ಮಾತನಾಡುತ್ತಿದ್ದಾರೆ. ಜನ ಅವರಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.

ದೇವೇಗೌಡರು ಅತ್ಯಂತ ಹಿರಿಯರು, ಅವರು ನಮ್ಮ ರಾಜ್ಯದ ಏಕೈಕ ಪ್ರಧಾನಿ. ಅವರಿಗೆ ಕೀಳು ಭಾಷೆಯಲ್ಲಿ ಮಾತನಾಡಿದ್ದಾರೆ. ಇದು ಖಂಡನೀಯ ಎಂದ ಜೋಶಿ ಅವರು, ಯಾರು ಗಲಾಟೆ ಮಾಡಿದ್ದಾರೆ, ಯಾರು ಧಿಕ್ಕಾರ ಕೂಗಿದ್ದಾರೆ ಎವರಿಗೆ ಜನ ತಕ್ಕ ಉತ್ತರ ನೀಡಲಿದ್ದಾರೆ ಎಂದರು.

ಎಚ್.ಡಿ. ಕುಮಾರಸ್ವಾಮಿ ಅವರು ಆಸ್ತಿ ಮಾಡಿದ್ದರೆ ಅವರ ಜತೆ ಕಾಂಗ್ರೆಸ್ನವರು ಯಾಕೆ ಸರ್ಕಾರ ಮಾಡಬೇಕಿತ್ತು? ಮನೆಯಲ್ಲಿ ಸುಮ್ಮನೇ ಕುಳಿತಿದ್ದರೂ ಕುಮಾರಸ್ವಾಮಿ ಜೊತೆ ಹೋಗಿ ಯಾಕೆ ಸರ್ಕಾರ ಮಾಡಬೇಕಿತ್ತು? ಎಂದು ಜೋಶಿ ಪ್ರಶ್ನೆ ಮಾಡಿದರು.

ಡಿ.ಕೆ. ಶಿವಕುಮಾರ್ ಅವರಿಂದಾಗಿ ಕರ್ನಾಟಕ ಸರ್ಕಾರದಲ್ಲಿ ಬಹಳ ಗೊಂದಲಗಳಿವೆ. ಆಡಳಿತ ಯಂತ್ರ ಕುಸಿದಿದೆ. ಇದು ಮುಂದೆ ಯಾವ ಹಂತಕ್ಕೆ ತಲುಪುತ್ತದೆಯೋ ಗೊತ್ತಿಲ್ಲ. ಸರ್ಕಾರ ಐದು ವರ್ಷ ಇರುತ್ತದೆ ಎಂಬ ವಿಶ್ವಾಸ ಇಲ್ಲ ಎಂದು ಜೋಶಿ ಹೇಳಿದರು.

ಕೆಲವೆಡೆ ವಾಹನ ತಡೆದರು:
ಧಾರವಾಡದಲ್ಲಿ ಸೋಮವಾರ ನಾಮಪತ್ರ ಸಲ್ಲಿಕೆಗೆ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದರು. ಆದರೆ, ಕಾಂಗ್ರೆಸ್ನವರ ಮಾತು ಕೇಳಿ ಕೆಲವೆಡೆ ಪಕ್ಷದ ಕಾರ್ಯಕರ್ತರ ವಾಹನಗಳನ್ನು ತಡೆಯಲಾಗಿತ್ತು. ಇದನ್ನು ಅಧಿಕಾರಿಗಳ ಗಮನಕ್ಕೆ ತಂದಾಗ ಸರಿಪಡಿಸಿ ವಾಹನ ಮುಂದೆ ಹೋಗಲು ಬಿಟ್ಟಿದ್ದಾರೆ ಎಂದು ಪ್ರಲ್ಹಾದ ಜೋಶಿ ಹೇಳಿದರು.

ರಾಜ್ಯದಲ್ಲಿ ಕಾಂಗ್ರೆಸ್ ಲೀಡ್ ಬರದೆ ಹೋದರೆ ರ್ಕುಚಿ ಬಿಡಬೇಕಾಗುತ್ತದೆ ಎನ್ನುವ ದರ್ಶನಾಪುರ ಹೇಳಿಕೆಗೆ ಪ್ರತಿಕ್ರಿಯಿಸಿದ ಜೋಶಿ ಅವರು, ಇದು ಜನಾಭಿಪ್ರಾಯ. ರ್ಕುಚಿ ಸಲುವಾಗಿ ವೋಟ್ ಕೊಡಬೇಕೋ, ಜನಹಿತಕ್ಕಾಗಿ ವೋಟ್ ಮಾಡಬೇಕೋ? ಇದನ್ನು ಕಾಂಗ್ರೆಸ್ ಮೊದಲು ಹೇಳಬೇಕು ಎಂದು ಪ್ರಶ್ನಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net