ಸರ್ವೇಯರ್ ಎಸಿಬಿ ಬಲೆಗೆ

BRIBE
Published on

ಮಂಗಳೂರು: ಬಹಳ ಸಮಯದಿಂದ ಲಂಚದ ಹಣಕ್ಕಾಗಿ ಪೀಡಿಸುತ್ತಿದ್ದ ಮಂಗಳೂರು ನಗರ ಸರ್ವೇಯರ್ (ಮಂಗಳೂರು ತಾಲೂಕಿನ ಪ್ರಭಾರ) ಗಂಗಾಧರ್ ಮಂಗಳವಾರ ಮಂಗಳೂರಿನ ಎಸಿಬಿ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ. ಮಂಗಳೂರಿನ ನಗರದಲ್ಲಿ ಉದ್ಯಮಿಯೊಬ್ಬರು ತಮ್ಮ ಕಚೇರಿ ಪೀಠೋಪಕರಣ ಮಾಡಿಸಲು ಮನೆಯ ಆವರಣದಲ್ಲಿದ್ದ ಸಾಗುವಾನಿ ಮರ ಕಡಿಯಲು ಅರಣ್ಯ ಇಲಾಖೆ ಅನುಮತಿ ಕೋರಿ ಪತ್ರ ಬರೆದಿದ್ದರು.

ಮಂಗಳೂರು ನಗರದ ಅರಣ್ಯ ಇಲಾಖೆ ಈ ಪತ್ರವನ್ನು ಕಂದಾಯ ಇಲಾಖೆಗೆ ಕಳಿಸಿತ್ತು. ಒಂದು ತಿಂಗಳು ಕಳೆದರೂ ಸ್ಥಳ ಪರಿಶೀಲನೆ ನಡೆಸಲು ಬಾರದ ಸರ್ವೇಯರ್ ಗಂಗಾಧರ್ ಸ್ಥಳ ಪರಿಶೀಲನೆಗೆ 3,000 ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಲಂಚ ಕೊಟ್ಟ ನಂತರ ತಿಂಗಳು ಕಳೆದರೂ ಮರ ಇರುವ ಸ್ಥಳದ ನಕಾಶೆ ನೀಡಲು ಮತ್ತೆ 30,000 ರೂ. ಡಿಮಾಂಡ್ ಬಂತು.

ಇದರಿಂದ ನೊಂದ ಉದ್ಯಮಿ ಮಂಗಳೂರಿನ ಪರಿಸರ ಸಂರಕ್ಷಣಾ ಸದಸ್ಯರ ಮೂಲಕ ಮಂಗಳೂರಿನ ಎಸಿಬಿ ಇನ್‌ಸ್ಪೆಕ್ಟರ್ ಶ್ಯಾಮಸುಂದರ್ ಗಮನಕ್ಕೆ ತರಲಾಯಿತು. ಮಂಗಳವಾರ ಸಂಜೆ ಮಂಗಳೂರಿನ ಮಿನಿ ವಿಧಾನ ಸೌಧದ ಎದುರು 20 ಸಾವಿರ ರೂ.ಲಂಚ ಪಡೆದುಕೊಳ್ಳುವ ಸಮಯ ಗಂಗಾಧರ್‌ನನ್ನು ಎಸಿಬಿ ತಂಡ ಬಂಧಿಸಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net