ಸರ್ವೆ ಕಾರ್ಯಕ್ಕೆ ಸಹಕರಿಸಲಿ

19BRG1
Published on

ಬೋರಗಾಂವ: ಕೇಂದ್ರ ಸರ್ಕಾರದ ಯೋಜನೆ ಅಡಿ ನಗರ, ಸ್ಥಳೀಯ ಸಂಸ್ಥೆಗಳ ಎಲ್ಲ ಆಸ್ತಿಗಳನ್ನು ಆಧುನಿಕ ತಂತ್ರಜ್ಞಾನ ಬಳಸಿ ಸರ್ವೆ ಕೈಗೊಳ್ಳಲಾಗುತ್ತಿದೆ. ಪ್ರಾಯೋಗಿಕವಾಗಿ ರಾಜ್ಯದ 10 ನಗರ ಹಾಗೂ ಪಟ್ಟಣಗಳನ್ನು ಆಯ್ಕೆ ಮಾಡಿಕೊಂಡಿದೆ. ಈ ಪೈಕಿ ಬೆಳಗಾವಿ ಜಿಲ್ಲೆಯ ಗೋಕಾಕ ಹಾಗೂ ಬೋರಗಾಂವ ಪಟ್ಟಣ ಆಯ್ಕೆಗೊಂಡಿದೆ ಎಂದು ಬುಡಾ ಅಧ್ಯಕ್ಷ ಲಕ್ಷ್ಮಣರಾವ್ ಚಿಂಗಳೆ ಮನವಿ ಮಾಡಿದರು.

ಪಟ್ಟಣದ ಶ್ರೀ ವಶಿಖಾನ್ ದೇವಸ್ಥಾನದಲ್ಲಿ ಕಂದಾಯ, ಭೂಮಾಪನ ಹಾಗೂ ಪಟ್ಟಣ ಪಂಚಾಯಿತಿ ಸಹಯೋಗದಲ್ಲಿ ಬುಧವಾರ ಆಯೋಜಿಸಿದ್ದ ನಕ್ಷಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಸರ್ಕಾರಿ, ಖಾಸಗಿ ಸೇರಿ ಎಲ್ಲ ಆಸ್ತಿಗಳ ನಿಖರ ಸರ್ವೆ ಕಾರ್ಯವನ್ನು ಭೂಮಾಪಣೆ ಇಲಾಖೆ ಹಾಗೂ ಪಟ್ಟಣ ಪಂಚಾಯಿತಿ ಜಂಟಿ ಸಹಯೋಗದೊಂದಿಗೆ ಕೈಗೊಳ್ಳಲಾಗುತ್ತಿದೆ. ಇದಕ್ಕೆ ನಾಗರಿಕರು ಸಹಕರಿಸಬೇಕು ಎಂದರು.

ಮುಖಂಡ ಉತ್ತಮ ಪಾಟೀಲ, ಜಿಪಂ ಮಾಜಿ ಸದಸ್ಯ ಅಣ್ಣಾಸಾಹೇಬ ಹಾವಲೆ, ಶಶಿಕಾಂತ ಹೆಗಡೆ, ವಿಜಯಕುಮಾರ, ಪಿಂಟು ಕಾಂಬಳೆ, ಭಾರತಿ ವಸವಾಡೆ, ಸ್ಥಾಯಿ ಸಮಿತಿ ಅಧ್ಯಕ್ಷ ಪ್ರದೀಪ ಮಾಳಿ, ಅಶೋಕ ಅರಗೆ, ಅಭಯಕುಮಾರ ಮಗದುಮ್, ಮಾಣಿಕ ಕುಂಬಾರ, ಪ್ರದೀಪ ಮಾಳಿ, ತುಳಸಿದಾಸ ವಾಸವಾಡೆ, ಶೋಭಾ ಹಾವಲೆ, ಗಿರಿಜಾ ವಠಾರೆ, ಸಂಗೀತಾ ಶಿಂಗೆ, ಪಪಂ ಮುಖ್ಯಾಧಿಕಾರಿ

ಎಸ್. ಬಿ.ತೋಡಕರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net