

ಮುದಗಲ್: ಪರಿಶಿಷ್ಟ ಪಂಗಡದ ಸಮಾಜಕ್ಕೆ ಕೇಂದ್ರ ಸರ್ಕಾರ ವಿಶೇಷ ಯೋಜನೆ ರೂಪಿಸಿದ್ದು, ಸರ್ವೇ ಮೂಲಕ ಎಸ್ಟಿ ಕಾಲನಿ, ಗ್ರಾಮ ಹಾಗೂ ಜನರ ಸೌಕರ್ಯಗಳ ಕುರಿತು ಸಮೀಕ್ಷೆ ನಡೆಸಲಾಗುತ್ತಿದೆ ಎಂದು ಜಾತಿ ಸಮೀಕ್ಷೆ ಅಧಿಕಾರಿ ಮಹಾಂತೇಶ ಬಳ್ಳೊಳ್ಳಿ ಹೇಳಿದರು.
ತಲೇಖಾನ್ ಗ್ರಾಪಂ ವ್ಯಾಪ್ತಿಯ ಹಡಗಲಿ ಗ್ರಾಮದಲ್ಲಿ ಗುರುವಾರ ಆದಿ ಕರ್ಮಯೋಗಿ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಮೀಕ್ಷೆಯಲ್ಲಿ 20ಕ್ಕೂ ಹೆಚ್ಚು ಪ್ರಶ್ನೆಗಳನ್ನು ಕೇಳಲಾಗುತ್ತಿದ್ದು, ಕುಡಿವ ನೀರು, ಅಂಗನವಾಡಿ, ಆಹಾರ, ಶಿಕ್ಷಣ, ರಸ್ತೆ, ದೇವಸ್ಥಾನ, ಜಮೀನು, ತೋಟಗಾರಿಕೆ, ಶೌಚಗೃಹ, ಮನೆ ಸೌಲಭ್ಯ, ವನ್ಯ ಭೂಮಿ, ಗೋವುಗಳ ರಕ್ಷಣೆ, ಮಕ್ಕಳ ಪೋಷಣೆ ಸೇರಿದಂತೆ ನಿತ್ಯ ತೊಂದರೆಗಳ ಕುರಿತು ಸಮೀಕ್ಷೆ ನಡೆಸಲಾಯಿತು. ತಲೇಖಾನ್, ಯರದೊಡ್ಡಿ ಹಾಗೂ ದೇಸಾಯಿ ಭೋಗಾಪುರ ಗ್ರಾಮಗಳಲ್ಲಿಯೂ ಸಮೀಕ್ಷೆ ನಡೆಸಲಾಯಿತು. ಗ್ರಾಪಂ ಸದಸ್ಯರಾದ ದುರುಗಪ್ಪ ಕಟ್ಟಿಮನಿ, ಮಾನಸಿಂಗ್ ರಾಠೋಡ, ಶರಣಪ್ಪ ತುಗ್ಗಲಿ, ಅಂಗನವಾಡಿ ಶಿಕ್ಷಕಿ ಅನ್ನಪೂರ್ಣಮ್ಮ ಇತರರಿದ್ದರು.