ಸಾರಿಗೆ ಸೌಲಭ್ಯ ವಂಚಿತ ಗ್ರಾಮಗಳ ಸಮೀಕ್ಷೆ

images
Published on

ಹಳ್ಳಿ, ತಾಂಡಗಳಿಗೆ ಬಸ್ ಸೇವೆ ಒದಗಿಸಲು ಶೀಘ್ರ ಕ್ರಮ: ವಿ.ಎಸ್. ಜಗದೀಶ್

ಹೊಸಪೇಟೆ: ವಿಜಯನಗರ ಜಿಲ್ಲೆಯ ಎಲ್ಲಾ ಹಳ್ಳಿಗಳಿಗೂ ಬಸ್‌ಗಳನ್ನು ಓಡಿಸುವ ಉದ್ದೇಶದಿಂದ, ಸೌಲಭ್ಯ ವಂಚಿತ ಗ್ರಾಮ, ತಾಂಡಗಳನ್ನು ಗುರುತಿಸಲಾಗುತ್ತಿದೆ ಎಂದು ಸಾರಿಗೆ ಇಲಾಖೆಯ ವಿಭಾಗೀಯ ನಿಯಂತ್ರಣಾಧಿಕಾರಿ ವಿ.ಎಸ್. ಜಗದೀಶ್ ತಿಳಿಸಿದರು.

ಬುಧವಾರ ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯ ಆರು ತಾಲೂಕುಗಳಲ್ಲಿ ಸಾರಿಗೆ ಸೌಲಭ್ಯ ವಂಚಿತ ಗ್ರಾಮ, ತಾಂಡಾಗಳಿಗೆ ಗುರುತಿಸಲಾಗುತ್ತಿದೆ. ಪ್ರಯಾಣಿಕರ ಸಂಖ್ಯೆ ಹಾಗೂ ಸಂಪರ್ಕ ಮಾರ್ಗಗಳನ್ನು ಆಧರಿಸಿ ಶೆಡ್ಯೂಲ್ ನಿಗದಿಪಡಿಸಲು ಉದ್ದೇಶಿಸಿದೆ. ಇದರಿಂದ ಎಲ್ಲರಿಗೂ ಶಕ್ತಿ ಯೋಜನೆ ಲಾಭ ತಲುಪಲಿದೆ. ಜತೆಗೆ ಎಲ್ಲರಿಗೂ ಸಾರಿಗೆ ಸೌಲಭ್ಯ ಕಲ್ಪಿಸಿದಂತಾಗುತ್ತದೆ ಎಂದು ತಿಳಿಸಿದರು.

ಜೂ.೧೧ ರಿಂದ ಆರಂಭಗೊAಡಿರುವ ಸರ್ಕಾರದ ಶಕ್ತಿ ಯೋಜನೆಗೆ ಜಿಲ್ಲೆಯಲ್ಲಿ ಉತ್ತಮ ಬೆಂಬಲ ವ್ಯಕ್ತವಾಗಿದೆ. ಜೂ.೧೧ ರಿಂದ ೩೦ರ ವರೆಗೆ ೧೪,೩೭,೫೯೭ ಮಹಿಳೆಯರು ಉಚಿತವಾಗಿ ಬಸ್‌ಗಳಲ್ಲಿ ಪ್ರಯಾಣಿಸಿದ್ದಾರೆ. ೫,೪೦,೧೪,೪೦೮ ರೂ. ಪ್ರಯಾಣದ ಮೊತ್ತವಾಗಿದೆ. ಜು ಒಂದರಿAದ ೧೮ರ ವರೆಗೆ ೧೫, ೧೮,೪೩೭ ಮಹಿಳಾ ಪ್ರಯಾಣಿಕರು ಪಯಣಿಸಿದ್ದಾರೆ. ೫,೮೭,೯೫,೦೧೮ ರು. ಪ್ರಯಾಣದ ಮೊತ್ತವಾಗಿದೆ. ಶಕ್ತಿ ಯೋಜನೆಯನ್ನು ಜಿಲ್ಲೆಯಲ್ಲಿ ಉತ್ತಮವಾಗಿ ಸಾಕಾರಗೊಳಿಸಲಾಗಿದ್ದು, ಬಸ್‌ಗಳ ಯಾವುದೇ ಸಮಸ್ಯೆ ಉಂಟಾಗದAತೆ ಕ್ರಮವಹಿಸಲಾಗಿದೆ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net