ಹಲವು ಸೌಲಭ್ಯ ಒದಗಿಸಲು ಆಗ್ರಹ ಬಯಲಾಟ ಕಲಾವಿದರ ಸಮೀಕ್ಷೆ

Survey of artists demanding provision of many facilities
Published on

ವಿಜಯಪುರ : ಇಂಡಿ ತಾಲೂಕಿನ ಬತಗುಣಕಿ ಗ್ರಾಮದ ಬಸವಣ್ಣ ದೇವರ ದೇವಸ್ಥಾನದಲ್ಲಿ ಇತ್ತೀಚೆಗೆ ಬಯಲಾಟ ಕಲಾವಿದರ ಸಮೀೆ ನಡೆಸಲಾಯಿತು. ಸಮೀಕ್ಷೆಯಲ್ಲಿ ಹಲವು ಕಲಾವಿದರು ಪಾಲ್ಗೊಂಡು ತಮ್ಮ ಮಾಹಿತಿ ದಾಖಲಿಸಿದರು.ರಾಜ್ಯ ಬಯಲಾಟ ಅಕಾಡೆಮಿ ಅಧ್ಯ ಕೆ.ಆರ್​. ದುರ್ಗಾದಾಸ್​ ನಿರ್ದೇಶನದ ಮೇರೆಗೆ ವಿಜಯಪುರದ ಡಾ. ಮೀನಾ ಪಾಟೀಲ್​ ಅವರು, ಕಲಾವಿದರ ಸಮೀಾ ಕಾರ್ಯ ಕೈಗೊಂಡರು. ಬಯಲಾಟ ತಂಡದ ಮುಖ್ಯಸ್ಥ ಕಾಶಿನಾಥ ಪಾಟೀಲರ ನೃತೃತ್ವದಲ್ಲಿ ಸುಮಾರು 60ಕ್ಕಿಂತ ಅಧಿಕ ಕಲಾವಿದರು ತಮ್ಮ ಹೆಸರನ್ನು ನೋಂದಾಯಿಸಿದರು.

ಕಲಾವಿದರ ಜೀವಿತ ಪ್ರಮಾಣ ಪತ್ರವನ್ನು ವರ್ಷಕ್ಕೆ ಒಂದು ಬಾರಿ ಬದಲಾಗಿ ಎರಡು ಬಾರಿ ನೀಡಬೇಕೆನ್ನುವ ಅಕಾಡೆಮಿಯ ಆದೇಶ ರದ್ದುಪಡಿಸಿ ಮೊದಲಿನಂತೆ ವರ್ಷಕ್ಕೆ ಒಮ್ಮೆ ಪ್ರಮಾಣ ಪತ್ರವನ್ನು ಪಡೆಯಲು ಕಲಾವಿದರು ಆಗ್ರಹಿಸಿದರು.ನಿರಂತರ ಕೃಷಿ ಕೆಲಸದಲ್ಲಿ ತೊಡಗಿಸಿಕೊಳ್ಳುವ ಹಲವು ಬಡ ಕಲಾವಿದರನ್ನು ಆರ್ಥಿಕವಾಗಿ ಸಶಕ್ತಗೊಳಿಸುವ ಮತ್ತು ಮಾಶಾಸನವು ಸೇರಿದಂತೆ ಹಲವು ಸೌಲಭ್ಯ ಒದಗಿಸುವ ಕೆಲಸ ಮಾಡಬೇಕೆಂದು ಕಲಾವಿದರು ಅಕಾಡೆಮಿ ಅಧ್ಯರಲ್ಲಿ ವಿನಂತಿಸಿದರು.

ಇಂಡಿ ತಾಲೂಕಿನ ಬತಗುಣಕಿ ಗ್ರಾಮದ ಬಸವಣ್ಣ ದೇವರ ದೇವಸ್ಥಾನದಲ್ಲಿ ಬಯಲಾಟ ಕಲಾವಿದರ ಸಮೀೆ ನಡೆಯಿತು. ಡಾ. ಮೀನಾ ಪಾಟೀಲ್​, ಕೆ.ಆರ್​. ದುರ್ಗಾದಾಸ್​, ಕಾಶಿನಾಥ ಪಾಟೀಲ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net