

ಸಿದ್ದಾಪುರ: ಕಾವೇರಿ ನದಿ ದಂಡೆ ಒತ್ತುವರಿಯನ್ನು ಅಳತೆ ಮಾಡುವಂತೆ ವಿರಾಜಪೇಟೆ ತಹಸೀಲ್ದಾರ್ ಅವರಿಗೆ ವ್ಯಕ್ತಿಯೊಬ್ಬರು ನೀಡಿದ ದೂರಿನ ಹಿನ್ನೆಲೆಯಲ್ಲಿ ಸರ್ವೇ ನಡೆಸಲು ಭೂಮಾಪನ ಇಲಾಖೆ ಅಧಿಕಾರಿಗಳನ್ನು ನಿಯೋಜಿಸಲಾಗಿದೆ.
ಗುಹ್ಯ ಹಾಗೂ ಕರಡಿಗೋಡು ಭಾಗದಲ್ಲಿ ಕಾವೇರಿ ನದಿ ದಡದಲ್ಲಿ ವಾಸಿಸುತ್ತಿರುವ ಕುಟುಂಬಗಳು ಬಫರ್‌ಜೋನ್ ಒತ್ತುವರಿ ಮಾಡಿಕೊಂಡಿರುವುದರಿಂದ ಸಮರ್ಪಕವಾಗಿ ಅಳತೆ ಮಾಡಿಸುವಂತೆ ಅರ್ಜಿ ನೀಡಲಾಗಿದೆ. ಈ ಸಂಬಂಧ ವಿರಾಜಪೇಟೆ ತಹಸೀಲ್ದಾರ್ ಪ್ರವೀಣ್ ಅವರು ಭೂಮಾಪನ ಅಧಿಕಾರಿ ಸೂರ್ಯ ಪ್ರಕಾಶ್ ಹಾಗೂ ರಘುವೀರ್ ಅವರನ್ನು ನಿಯೋಜಿಸಿದ್ದು ಅ.27ರಂದು ಸಂಬಂಧ ಪಟ್ಟ ಇಲಾಖೆ ಸಿಬ್ಬಂದಿಗಳೊಂದಿಗೆ ಹಾಜರಿರುವುದಾಗಿ ಹಿಂಬರಹ ನೀಡಿದ್ದಾರೆ.