ಸಮೀಕ್ಷೆ ಯಶಸ್ಸಿಗೆ ಜಾಗೃತಿ ಮೂಡಿಸಿ

28 MASKI 01
ಮಸ್ಕಿ ತಾಲೂಕು ಉದ್ಬಾಳದಲ್ಲಿ ಕೈಗೊಂಡ ಸಾಮಾಜಿಕ ಶೈಕ್ಷಣಿಕ ಸಮೀಕ್ಷೆ ಸಿಬ್ಬಂದಿಯೊಂದಿಗೆ ಜಿಪಂ ಉಪ ಕಾರ್ಯದರ್ಶಿ ಹಾಲಸಿದ್ದಪ್ಪ ಪೂಜೇರಿ ಚರ್ಚಿಸಿದರು. ತಾಪಂ ಮುಖ್ಯಕಾರ್ಯನಿಹಕ ಅಧಿಕಾರಿ ಅಮರೇಶ ಯಾದವ, ಉದ್ಬಾಳ ಗ್ರಾಪಂಅಭಿವೃದ್ದಿ ಅಧಿಕಾರಿ ಬಸವರಾಜ ಇದ್ದರು.
Published on

ಮಸ್ಕಿ: ಟ್ಟಣದ ತಾಪಂ ಹಾಗೂ ತಹಸಿಲ್ ಕಚೇರಿಗೆ ಜಿಪಂ ಉಪ ಕಾರ್ಯದರ್ಶಿ ಹಾಲಸಿದ್ದಪ್ಪ ಪೂಜೇರಿ ಶನಿವಾರ ಭೇಟಿ ನೀಡಿ ಸಾಮಾಜಿಕ ಶೈಕ್ಷಣಿಕ ಸಮಿಕ್ಷೆ ಪ್ರಗತಿ ಕುರಿತು ಮಾಹಿತಿ ಪಡೆದರು.

ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ಮತ್ತು ಸಿಬ್ಬಂದಿ, ಸಮೀಕ್ಷೆಯ ನೊಡಲ್ ಅಧಿಕಾರಿಗಳೊಂದಿಗೆ ವಿಸಿ ಮೂಲಕ ಸಭೆ ನಡೆಸಿದರು. ಪ್ರತಿ ಕುಟುಂಬದ ಮಾಹಿತಿಯನ್ನು ನಿಗದಿತ ನಮೂನೆಯಲ್ಲಿ ಪಡೆದು ತಂತ್ರಾಂಶದಲ್ಲಿ ದಾಖಲಿಸಬೇಕು. ಗ್ರಾಪಂ ಮಟ್ಟದ ಸ್ವ ಸಹಾಯ ಗುಂಪುಗಳ ಮಹಿಳೆಯರು ಸಮೀಕ್ಷೆ ಕುರಿತು ಗ್ರಾಮೀಣರಲ್ಲಿ ಜಾಗೃತಿ ಮೂಡಿಸಬೇಕು. ಸಮೀಕ್ಷೆ ಯಶಸ್ಸಿಗೆ ಗ್ರಾಪಂ ಸಂಪೂರ್ಣ ಸಹಕಾರ ಒದಗಿಸಬೇಕು. ಗಣತಿದಾರರು ಪ್ರತಿದಿನ ಸಮೀಕ್ಷೆ ಕಾರ್ಯದಲ್ಲಿ ಭಾಗವಹಿಸುವುದನ್ನು ಖಚಿತ ಪಡಿಸಿಕೊಳ್ಳಬೇಕು. 3-4 ದಿನಗಳ ಒಳಗೆ ಸಮೀಕ್ಷೆ ಪೂರ್ಣಗೊಳಿಸಬೇಕು ಎಂದರು.

ನಂತರ ಕ್ಯಾತ್ನಟ್ಟಿ, ಚಿಕ್ಕಕಡಬೂರು, ಉದ್ಬಾಳ ಗ್ರಾಮಕ್ಕೆ ಭೇಟಿ ನೀಡಿ ಸಮೀಕ್ಷೆ ಕಾರ್ಯ ವೀಕ್ಷಿಸಿ ಸಿಬ್ಬಂದಿಗೆ ಸೂಚನೆ ನೀಡಿದರು. ವ್ಯವಸ್ಥಾಪಕ ಗಂಗಾಧರ ಮೂರ್ತಿ, ಸಿಬ್ಬಂದಿ ಚಂದ್ರಶೇಖರ ಬಸವರಾಜ, ಮೌನೇಶ, ಪ್ರಕಾಶ ಅರ್ಜುನ, ಲಕ್ಷ್ಮಣ ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net