

ಮೈಸೂರು: ಕುಕ್ಕರಹಳ್ಳಿ ಕೆರೆಯ ಸುಸ್ಥಿರ ಅಭಿವೃದ್ಧಿ ಹಾಗೂ ಕೆರೆಗೆ ನೀರು ಪೂರೈಸುವ ಪೂರ್ಣಯ್ಯ ನಾಲೆಯ ಅಭಿವೃದ್ಧಿಗೆ ಸಮಗ್ರ ಯೋಜನಾ ವರದಿ (ಡಿಪಿಆರ್) ತಯಾರಿಸಲು ನವದೆಹಲಿಯ ಇಂಡಿಯನ್ ನ್ಯಾಷನಲ್ ಟ್ರಸ್ಟ್ ಫಾರ್ ಆರ್ಟ್ ಅಂಡ್ ಕಲ್ಚರಲ್ ಹೆರಿಟೇಜ್ (ಇನ್‌ಟ್ಯಾಕ್) ಸಂಸ್ಥೆಯ ಪ್ರತಿನಿಧಿಗಳು ಶುಕ್ರವಾರ ಡ್ರೋನ್ ಸರ್ವೇ ನಡೆಸಿದರು.
ಕುಕ್ಕರಹಳ್ಳಿ ಮಾರ್ಗದಲ್ಲಿ ಸಂಚರಿಸಿದ ಇನ್‌ಟ್ಯಾಕ್ ಪ್ರತಿನಿಧಿಗಳು ಡ್ರೋಣ್ ಮೂಲಕ ಸರ್ವೇ ನಡೆಸಿದರು. ಡ್ರೋಣ್ ಸರ್ವೇಯ ಜತೆಗೆ ಕೆರೆಯ ಜೀವವೈವಿಧ್ಯತೆ ಕುರಿತು ಅಧ್ಯಯ ನಡೆಸಿದರು. ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಕೆಲವು ತಿಂಗಳ ಹಿಂದೆ ಕುಕ್ಕರಹಳ್ಳಿ ಕೆರೆಗೆ ಭೇಟಿ ನೀಡಿ ಕೆರೆಯ ಅಭಿವೃದ್ಧಿ ಕುರಿತು ಅಧಿಕಾರಿಗಳೊ ಂದಿಗೆ ಚರ್ಚೆ ನಡೆಸಿದ್ದರು. ಈ ಸಂದರ್ಭ ಕೆರೆಯ ಸುಸ್ಥಿರ ಅಭಿವೃದ್ಧಿ ಕುರಿತು ಪರಿಸರ ತಜ್ಞರು ಸಲಹೆ ನೀಡಿದ್ದರು. ಸರ್ವೇ ಸಂದರ್ಭ ಇಂಟ್ಯಾಕ್ ಪ್ರತಿನಿಧಿ ಸುಮೇಶ್, ಪರಿಸರ ತಜ್ಞರಾದ ಯು.ಎನ್. ರವಿಕುಮಾರ್, ಶೈಲಜೇಶ್, ವಿಶ್ವನಾಥ್, ಶೋಭನಾ ಹಾಗೂ ಇತರರು ಇದ್ದರು.