

ರಾಯಚೂರು ಹಿಂದುಳಿದ ಆಯೋಗದಿಂದ ಜಿಲ್ಲೆಯಲ್ಲಿ ನಡೆಸಲಾಗುತ್ತಿರುವ ಸಾಮಾಜಿಕ, ಶೈಕ್ಷಣಿಕ ಸಮೀಕ್ಷಾ ಕಾರ್ಯಕ್ಕೆ ಸರ್ವರ್ ಸಮಸ್ಯೆ, ಗಣತಿದಾರರ ಗೈರಾಜರಿ ಸಮಸ್ಯೆಗಳ ಮಧ್ಯ ಸಮೀಕ್ಷೆಯನ್ನು ಮೂರು ದಿನಗಗಳಲ್ಲಿ ಮುರು ಜನ ಶಿಕ್ಷಕರು ಹಾಗೂ ಇಬ್ಬರು ಅಂಗನವಾಡಿ ಸಹಾಯಕಿ ಸೇರಿ ಒಟ್ಟು 5 ಜನ ಗಣತಿಗಾರರು ಮೂರು ದಿನದಲ್ಲಿ ಸಮೀಕ್ಷೆ ಪೂರ್ಣಗೊಳಿಸಿದ್ದಾರೆ.
ರಾಜ್ಯ ಸರ್ಕಾರ ಕೈಗೊಂಡಿರುವ ರಾಜ್ಯದ ಜನರ ಸಾಮಾಜಿಕ, ಶೈಕ್ಷಣಿಕ ಸ್ಥಿತಿಗತಿಗಳನ್ನು ತಿಳಿಯಲು ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಮುಂದಾಗಿ ದ್ದು, ಸೆ.22ರಿಂದ ಸಮೀಕ್ಷೆ ಪ್ರಾರಂಭವಾಗಿತ್ತು. ಸಮೀಕ್ಷೆಗೆ ಜಿಲ್ಲೆಯ ಏಳು ತಾಲೂಕುಗಳಲ್ಲಿ 3178 ಗಣತಿದಾರರನ್ನು ನೇಮಿಸಲಾಗಿತ್ತು.
ರಾಯಚೂರು ತಾಲೂಕಿನ ಕಟ್ಲಟ್‌ಕೂರು ಮಾದರಿ ಹಿರಿಯ ಪ್ರಾಥಮಿಕ ಶಾಲೆ ಸಹ ಶಿಕ್ಷಕ ಕೃಷ್ಣಮೂರ್ತಿಗೆ 86 ಮನೆಗಳು, ಲಿಂಗಸುಗೂರು ತಾಲೂಕಿನ ರಾಂಪುರು ಗ್ರಾಮದ ಶಿಕ್ಷಕ ಶರಣು ಮಂಕಣಿಗೆ 103 ಮನೆಗಳು, ಸಿರವಾರ ತಾಲ್ಲೂಕಿನ ಚಾಗಭಾವಿಯ ಶಿಕ್ಷಕ ಗುರುಮೂರ್ತಿ ಹಾಗೂ ಇಬ್ಬರು ಅಂಗನವಾಡಿ ಕಾರ್ಯಕರ್ತೆಯರಿಗೆ 78 ಮನೆಗಳನ್ನು ನೀಡಲಾಗಿತ್ತು.
ನಿಗದಿಪಡಿಸಿದ್ದ ಬ್ಲಾಕ್‌ನಲ್ಲಿ ಗಣತಿದಾರರಿಗೆ ನೀಡಲಾದ ಮನೆಗಳ ಸಮೀಕ್ಷೆ ಮೂರು ದಿನಗಳಲ್ಲಿ ಸಮೀಕ್ಷೆಯನ್ನು ಮುಗಿಸಿದ್ದರಿಂದ ಶಿಕ್ಷಕರ ಕಾರ್ಯಕ್ಕೆ ಜಿಲ್ಲಾಡಳಿತ ದಿಂದ ಶ್ಲಾಘಿಸಿ, ಅಭಿನಂದನಾ ಪತ್ರ ನೀಡಿ ಗೌರವಿಸಿದೆ.