

ವಿಜಯಪುರ: ಕರೊನಾ ನಿಯಂತ್ರಣಕ್ಕೆ ರಾಜ್ಯದಲ್ಲೇ ಮಾದರಿಯಾಗಿರುವ ವಿಜಯಪುರ ಜಿಲ್ಲಾಡಳಿತ ಇದೀಗ ಮತ್ತೊಂದು ಮಹತ್ವದ ತೀರ್ಮಾನ ಕೈಗೊಂಡಿದ್ದು ಪ್ಯಾರಾಸಿಟಾಮಲ್ ಮೇಲೂ ಕಣ್ಣಿಟ್ಟಿದೆ !
ಹೌದು, ಪ್ಯಾರಾಸಿಟಾಮಲ್ ಉಪಯೋಗಿಸುವವರು ಕರೊನಾ ಲಕ್ಷಣಗಳಿಗೆ ಒಳಗೊಂಡಿರುವ ಸಾಧ್ಯತೆಯೂ ಇದೆ. ಹೀಗಾಗಿ ಇನ್ಮುಂದೆ ಯಾರು ಈ ಔಷಧ ಪಡೆಯುತ್ತಾರೋ ಅವರ ಸಂಪೂರ್ಣ ಮಾಹಿತಿ ಪಡೆಯಬೇಕಾಗುತ್ತದೆ. ಈ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲ ಔಷಧ ಮಳಿಗೆಕಾರರಿಗೆ ಇಂಥದ್ದೊಂದು ಕಟ್ಟುನಿಟ್ಟಿನ ಸೂಚನೆ ನೀಡಲಾಗುವುದೆಂದು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ತಿಳಿಸಿದ್ದಾರೆ.
ಪ್ಯಾರಾಸಿಟಮಲ್ ತಗೊಳ್ಳೋದೆ ಜ್ವರ ಬಂದ ಕಾರಣಕ್ಕೆ. ಹೀಗಾಗಿ ಯಾರು ಈ ಮಾತ್ರೆ ಪಡೆದರು ಎಂಬ ವಿವರ ಪಡೆಯುವ ಅವಶ್ಯಕತೆ ಇದೆ. ಎಷ್ಟು ಇದೆ, ಎಷ್ಟು ಮಾರಾಟ ಮಾಡಿದ್ದಾರೆ ಎಂಬ ದಾಖಲೆ ಇಟ್ಟುಕೊಳ್ಳಬೇಕು. ಈಗಾಗಲೇ ಎಷ್ಟು ಸಂಗ್ರಹಿಸಲಾಗಿದೆ? ಎಷ್ಟು ಮಾರಾಟವಾಗಿದೆ? ಎಂಬ ಮಾಹಿತಿ ಆರೋಗ್ಯ ಇಲಾಖೆಗೆ ನೀಡಬೇಕು. ಬರುವ ದಿನಗಳಲ್ಲಿ ಯಾರು ಈ ಔಷಧ ಪಡೆಯುತ್ತಾರೋ ಅವರ ಮಾಹಿತಿ ಪಡೆಯಬೇಕು. ಅದನ್ನಾಧರಿಸಿ ಜಿಲ್ಲಾಡಳಿತ ಗ್ರಹ ಬಂಧನ ವ್ಯವಸ್ಥೆ ಮಾಡಲು ಅನುಕೂಲವಾಗಲಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.