

ಕುಶಾಲನಗರ:
ಕೂಡುಮಂಗಳೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ನಿವೇಶನ ರಹಿತರಿಗೆ ನಿವೇಶನಗಳನ್ನು ನೀಡುವ ಸಲುವಾಗಿ ಲೇಔಟ್ ಮಾಡಲು ಈಚೆಗೆ ಡಿಜಿಎಸ್‌ಆರ್ ಸರ್ವೆ ಕಾರ್ಯ ನಡೆಸಲಾಯಿತು.
ಈ ಕುರಿತು ಮಾತನಾಡಿದ ಪಂಚಾಯತಿ ಅಧ್ಯಕ್ಷರಾದ ಭಾಸ್ಕರ್ ನಾಯಕ್, ಕೂಡುಮಂಗಳೂರು ಗ್ರಾಮ ಪಂಚಾಯತಿಯ ಚಿಕ್ಕತ್ತೂರು ವ್ಯಾಪ್ತಿಯಲ್ಲಿ ಸರ್ವೆ ನಂಬರ್ 14/1 ರಲ್ಲಿ ಪಂಚಾಯಿತಿ ವ್ಯಾಪ್ತಿಯ ನಿವೇಶನ ರಹಿತರಿಗೆ ನಿವೇಶನಗಳನ್ನು ನೀಡಲು ಜಾಗ ಮಂಜೂರಾಗಿದೆ. ಈ ಜಾಗವನ್ನು ಲೇಔಟ್ ಮಾಡಲು ಡಿಜಿಎಸ್‌ಆರ್ ಸರ್ವೆ ಕಾರ್ಯವನ್ನ ಕೈಗೊಳ್ಳಲಾಗಿದೆ.
ಶಾಸಕರ ಸಹಾಯದೊಂದಿಗೆ ಆದಷ್ಟು ಬೇಗ ಲೇಔಟ್ ಅಭಿವೃದ್ಧಿಪಡಿಸಿ ಕಾನೂನು ಬದ್ಧವಾಗಿ ನಿವೇಶನ ರಹಿತರಿಗೆ ನಿವೇಶನ ಹಂಚಿಕೆ ಮಾಡಲಾಗುವುದು ಎಂದು ತಿಳಿಸಿದರು. ಈ ಸಂದರ್ಭ ಪಂಚಾಯಿತಿ ಪಿಡಿಒ ಸಂತೋಷ್, ಅವಿನಾಶ್ ಹಾಗೂ ಅಧಿಕಾರಿಗಳು ಇದ್ದರು.