ಬಾಗಲಕೋಟೆ ನಿವಾಸಿ ಸಮುದ್ರಪಾಲು

crime
Published on


ಸುರತ್ಕಲ್: ಮಲ್ಲಮಾರ್ ಸಮುದ್ರತೀರಕ್ಕೆ ಪ್ರವಾಸ ಬಂದಿದ್ದ ಬಾಗಲಕೋಟೆಯ ಮೂವರ ಪೈಕಿ ಓರ್ವ ಸಮುದ್ರ ಪಾಲಾಗಿದ್ದು, ಇತರ ಇಬ್ಬರನ್ನು ಸ್ಥಳೀಯರು ರಕ್ಷಿಸಿದ ಘಟನೆ ಭಾನುವಾರ ನಡೆದಿದೆ.


ಬಾಗಲಕೋಟೆ ನಿವಾಸಿ ಮಹಂತೇಶ್(29) ಮೃತಪಟ್ಟವರು. ಸ್ನೇಹಿತರ ಜತೆ ಅವರು ಭಾನುವಾರ ಸಮುದ್ರ ತೀರಕ್ಕೆ ವಿಹಾರಕ್ಕೆ ಆಗಮಿಸಿದ್ದರು. ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net