ಸೂರಶೆಟ್ಟಿಕೊಪ್ಪ ಬ್ರಹ್ಮಲಿಂಗೇಶ್ವರ ಜಾತ್ರೆ

IMG_20250419_204916_236.jpg
Published on

ಹುಬ್ಬಳ್ಳಿ: ಕಲಘಟಗಿ ತಾಲೂಕಿನ ಸೂರಶೆಟ್ಟಿಕೊಪ್ಪ ಗ್ರಾಮದ ಶ್ರೀ ಬ್ರಹ್ಮಲಿಂಗೇಶ್ವರ ಜಾತ್ರಾ ಮಹೋತ್ಸವ ಏ. 20ರಿಂದ ನಾಲ್ಕು ದಿನ ನಡೆಯಲಿದೆ.

ಏ. 20ರಂದು ದೇವತಾಕಾರ್ಯ ನಡೆಯುವುದು, ವಿವಿಧ ವಾದ್ಯಗಳೊಂದಿಗೆ ಶ್ರೀ ಬ್ರಹ್ಮಲಿಂಗೇಶ್ವರ ಪಲ್ಲಕ್ಕಿ ಶ್ರೀಗುಡ್ಡದ ಬಸವಣ್ಣದೇವರ ಗುಡಿಯವರೆಗೂ ಸಾಗುತ್ತದೆ. ಪಲ್ಲಕ್ಕಿ ಉತ್ಸವದಲ್ಲಿ ಗ್ರಾಮಸ್ಥರು ಪಾಲ್ಗೊಂಡು ದೇವತಾಕಾರ್ಯ ಮುಗಿದ ನಂತರ ಬ್ರಹ್ಮಲಿಂಗೇಶ್ವರ ದೇವಸ್ಥಾನದ ಎದುರಿಗೆ ಅನ್ನ ಪ್ರಸಾದ ಸೇವೆ ನಡೆಯುವುದು.

ಮಹಾರಥೋತ್ಸವವು ಏ. 21ರಂದು ಜರುಗಲಿದೆ. ಅಂದು ರಾತ್ರಿ ಸಾಮಾಜಿಕ ನಾಟಕ "ರೈತನ ಕಣ್ಣಿರಿಗೆ ಆಸರೆ ಯಾರು' ಪ್ರದರ್ಶನ ಏರ್ಪಡಿಸಲಾಗಿದೆ.

22ರಂದು ಮಕ್ಕಳಿಂದ ಮನರಂಜನೆ ಕಾರ್ಯಕ್ರಮ ನಡೆಯಲಿದೆ. 23ರಂದು ಕಡುಬಿನ ಕಾಳಗ ಜರುಗಲಿದೆ. ಅದೇ ರಾತ್ರಿ ಸಾಮಾಜಿಕ ನಾಟಕ "ತವರು ಮನೆ ಕುಂಕುಮ' ಪ್ರದರ್ಶನಗೊಳ್ಳಲಿದೆ ಎಂದು ಶ್ರೀ ಬ್ರಹ್ಮಲಿಂಗೇಶ್ವರ ಟ್ರಸ್ಟ್ ಕಮಿಟಿ ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net