ಸಾಮರಸ್ಯದ ಸಂದೇಶ ಸಾರಿದ ಶರಣರು

Untitled design (7)
ಹೂವಿನಹಡಗಲಿಯಲ್ಲಿ ಹಮ್ಮಿಕೊಂಡಿದ್ದ ಮಾಸಿಕ ಶಿವಾನುಭವ ಕಾರ್ಯಕ್ರಮವನ್ನು ಸಾಹಿತಿ ಶೋಭಾ ಪ್ರಕಾಶ ಮಲ್ಕಿಒಡೆಯರ್ ಉದ್ಘಾಟಿಸಿದರು. ಗವಿಮಠದ ಡಾ.ಹಿರಿಶಾಂತವೀರ ಸ್ವಾಮೀಜಿ, ನಿರಂಜನ ಸ್ವಾಮೀಜಿ, ನಿವೃತ್ತ ಶಿಕ್ಷಕ ವಿ.ಎಸ್.ಕಾಡಗಿಮಠ ಇತರರಿದ್ದರು.
Published on

ಹೂವಿನಹಡಗಲಿ: ಶರಣರ ಸಾಹಿತ್ಯವು ಸಾಮಾಜದ ಪರಿವರ್ತನೆಗೆ ಕಾರಣವಾಗಿದೆ ಎಂದು ಗವಿಮಠದ ಡಾ.ಹಿರಿಶಾಂತವೀರ ಸ್ವಾಮೀಜಿ ಹೇಳಿದರು.


ಪಟ್ಟಣದ ಶಿವಶಾಂತವೀರ ಸಮುದಾಯ ಭವನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ 183ನೇ ಮಾಸಿಕ ಶಿವಾನುಭವ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಮಾತನಾಡಿದರು.

ಶರಣರು ಜಾತಿ, ಮತ, ಪಂಥ ಮತ್ತು ವರ್ಗ ಭೇದಗಳನ್ನು ತೊಡೆದು ಮನುಷ್ಯ ಮನುಷ್ಯರಲ್ಲಿ ನಿಜವಾದ ಪ್ರೀತಿ, ಸಾಮರಸ್ಯದಿಂದ ಜೀವನ ನಡೆಸುವಂತಹ ಸಂದೇಶಗಳನ್ನು ಸಾರಿದ್ದಾರೆ. ಬಸವಣ್ಣನವರ ಮಾತುಗಳು ವಚನಗಳಾದವು.

ಮನುಷ್ಯನ ಜೀವನಕ್ಕೆ ನೈತಿಕ ಮೌಲ್ಯಗಳನ್ನು ಕೊಟ್ಟಿದ್ದಾರೆ. ಅವರ ಮಾನವೀಯ ಮೌಲ್ಯಗಳನ್ನು ತಿಳಿಯುವುದು ಶಿವಾನುಭವ ಎನಿಸಿಕೊಳ್ಳುತ್ತದೆ ಎಂದರು.


ಶಿಕ್ಷಕ ಮಹೇಶ್ ಉಪನ್ಯಾಸ ನೀಡಿದರು. ಚರಪೀಠಾಧಿಪತಿ ಹಿಮಾಲಯನ್ ಯೋಗ ಪರಿಣಿತ ನಿರಂಜನ ಸ್ವಾಮೀಜಿ, ನಿವೃತ್ತ ಶಿಕ್ಷಕ ವಿ.ಎಸ್.ಕಾಡಗಿಮಠ, ಸಾಹಿತಿ ಶೋಭಾ ಪ್ರಕಾಶ ಮಲ್ಕಿಒಡೆಯರ್, ನಿವೃತ್ತ ಅಧಿಕಾರಿ ಎ.ವೀರಣ್ಣ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net