ಮೈಸೂರು: ಆಡಂಬರವನ್ನು ತಿರಸ್ಕರಿಸಿ ಆದರ್ಶಗಳನ್ನು ಎತ್ತಿಹಿಡಿಯುವ ಮೂಲಕ ಶರಣರು ಸಮಾಜದ ಏಳಿಗೆಗೆ ಶ್ರಮಿಸಿದರು ಎಂದು ಚಿತ್ರದುರ್ಗ ಮುರುಘಾ ಮಠದ ಶ್ರೀ ಶಿವಮೂರ್ತಿ ಮುರುಘಾ ಶರಣರು ಬಣ್ಣಿಸಿದರು.
ಶರಣು ವಿಶ್ವವಚನ ಫೌಂಡೇಷನ್ ವತಿಯಿಂದ ಅಂತರ್ಜಾಲದ ಮುಖಾಂತರ ಆಯೋಜಿಸಿದ್ದ ಏಳನೇ ಅಂತರ್ಜಾಲ ಪ್ರವಚನ ಕಾರ್ಯಕ್ರಮದಲ್ಲಿ ಶರಣರ ಜೀವನ ವಿಧಾನ ಎಂಬ ವಿಷಯ ಕುರಿತು ಪ್ರವಚನ ನೀಡಿದರು.
ಬದುಕಿಗಾಗಿ ಬದುಕಿದವರು, ಸುಖಕ್ಕಾಗಿ ಬದುಕಿದವರು ಮತ್ತು ಆದರ್ಶಕ್ಕಾಗಿ ಬದುಕಿದವರು ಎಂಬ ಮೂರು ರೀತಿಯ ಜೀವನವನ್ನು ನಡೆಸಿದವರನ್ನು ಕಾಣಬಹುದು. ಆದರೆ ಶರಣರು ಆದರ್ಶಕ್ಕಾಗಿ ಬದುಕಿ ವಚನಗಳನ್ನು ನೀಡಿ ಹೋಗಿದ್ದಾರೆ. ಶರಣರ ವಚನ ಕೇಳಿ ಸುಮ್ಮನಾಗದೆ ಶರಣಶಕ್ತಿಯನ್ನು ಅವೀರ್ಭವಿಸಬೇಕು ಎಂದು ಹೇಳಿದರು.
ನಮ್ಮ ಕಣ್ಣುಗಳು ಎತ್ತಕಡೆ ಸಾಗುತ್ತವೆಯೋ ಕಾಲುಗಳು ಕೂಡಾ ಅತ್ತಕಡೆ ಸಾಗುತ್ತವೆ. ಆದ್ದರಿಂದ ಸದ್ಗುಣಗಳೆಂಬ ಆಭರಣಗಳನ್ನು ಧಾರಣೆ ಮಾಡಬೇಕು. ನಾವು ಸೈಟ್ ಕೊಳ್ಳದೆ, ವೆಬ್‌ಸೈಟ್ ಬಗ್ಗೆ ತಲೆಕೆಡಿಸಿಕೊಳ್ಳದೆ ಒಳನೋಟದ ಬಗ್ಗೆ ಚಿಂತನೆ ನಡೆಸಬೇಕು. ಆ ರೀತಿ ಒಳನೋಟದ ಚಿಂತನೆ ನಡೆಸಿ ಬಸವಣ್ಣನವರು ತಮ್ಮ ಹೆಸರಿನ ಜತೆ ಜಗದ್ದುರು ಎಂದು ಇಟ್ಟುಕೊಳ್ಳದೇ ಇದ್ದರೂ ಜಾತಿ ಬೆಸುಗೆ, ಧರ್ಮ ಬೆಸುಗೆ ಮತ್ತು ಹೃದಯ ಬೆಸುಗೆ ಮಾಡಿ ಜಗಜ್ಯೋತಿಯಾದರು ಎಂದರು.
ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕಿ ರೂಪಾ ಕುಮಾರಸ್ವಾಮಿ ಮಾತನಾಡಿ, 2016ರಿಂದ ಇಲ್ಲಿಯವರೆಗೆ ಸಂಸ್ಥೆ ವಿವಿಧ ಆಯಾಮಗಳಲ್ಲಿ ವಚನ ಪ್ರಸಾರ ಮಾಡಿದೆ. ಇದರ ಫಲವಾಗಿ ಶರಣರ ವಚನಗಳನ್ನು ಜಾಗತಿಕ ಮಟ್ಟದಲ್ಲಿ ಒಪ್ಪಿಕೊಳ್ಳಲಾಗಿದೆ. ಅಲ್ಲದೆ ಬಸವಣ್ಣನವರ ಪ್ರತಿಮೆಗಳನ್ನು ದೇಶದ ಹೊರಗೂ ಸ್ಥಾಪಿಸುತ್ತಿರುವುದು ಭಾರತೀಯರಲ್ಲದೇ ಕನ್ನಡಿಗರು ಹೆಚ್ಚು ಹೆಮ್ಮೆ ಪಡಬೇಕಾದ ವಿಷಯ ಎಂದರು.
ಜಗದ್ದುರು ಎಂದು ಇಟ್ಟುಕೊಳ್ಳದೇ ಇದ್ದರೂ ಜಾತಿ ಬೆಸುಗೆ, ಧರ್ಮ ಬೆಸುಗೆ ಮತ್ತು ಹೃದಯ ಬೆಸುಗೆ ಮಾಡಿ ಜಗಜ್ಯೋತಿಯಾದರು ಎಂದರು.
ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕಿ ರೂಪಾ ಕುಮಾರಸ್ವಾಮಿ ಮಾತನಾಡಿ, 2016ರಿಂದ ಇಲ್ಲಿಯವರೆಗೆ ಸಂಸ್ಥೆ ವಿವಿಧ ಆಯಾಮಗಳಲ್ಲಿ ವಚನ ಪ್ರಸಾರ ಮಾಡಿದೆ. ಇದರ ಫಲವಾಗಿ ಶರಣರ ವಚನಗಳನ್ನು ಜಾಗತಿಕ ಮಟ್ಟದಲ್ಲಿ ಒಪ್ಪಿಕೊಳ್ಳಲಾಗಿದೆ. ಅಲ್ಲದೆ ಬಸವಣ್ಣನವರ ಪ್ರತಿಮೆಗಳನ್ನು ದೇಶದ ಹೊರಗೂ ಸ್ಥಾಪಿಸುತ್ತಿರುವುದು ಭಾರತೀಯರಲ್ಲದೇ ಕನ್ನಡಿಗರು ಹೆಚ್ಚು ಹೆಮ್ಮೆ ಪಡಬೇಕಾದ ವಿಷಯ ಎಂದರು.
ಫೌಂಡೇಷನ್ ಸಂಸ್ಥಾಪಕ ಡಾ. ವಚನ ಕುಮಾರಸ್ವಾಮಿ, ಲಾಳನಹಳ್ಳಿ ಮಠದ ಜಯದೇವಿತಾಯಿ, ಅನಿಲ್ ಕುಮಾರ್ ವಾಜಂತ್ರಿ, ಕಾವೇರಿ ವಾಜಂತ್ರಿ, ಪಿ.ವಿ.ರುದ್ರೇಶ್, ಸುಧಾ ಮೃತ್ಯುಂಜಯಪ್ಪ, ಶೈಲ ಸಿದ್ಧರಾಮಪ್ಪ, ಅಕ್ಕಮಹಾದೇವಿ ಮರಮ್ಕಲ್, ಇಂಧುಮತಿ ಶೀಲಾಮಠ್ ಇತರರು ಭಾಗವಹಿಸಿದ್ದರು.