

ಅಳವಂಡಿ: ಪುರಾಣ ಕಾರ್ಯಕ್ರಮದಲ್ಲಿ ಭಾಗಿವಹಿಸುವುದರಿಂದ ಮನಸ್ಸಿಗೆ ನೆಮ್ಮದಿ, ಶಾಂತಿ, ಉತ್ಸಾಹ ದೊರೆಯುತ್ತದೆ ಎಂದು ಶ್ರೀ ಮರುಳಾರಾದ್ಯ ಶಿವಾಚಾರ್ಯರು ಹೇಳಿದರು.
ಗ್ರಾಮದ ಶ್ರೀ ಸಿದ್ದೇಶ್ವರ ಮಠದಲ್ಲಿ ಶ್ರಾವಣ ಮಾಸದ ಅಂಗವಾಗಿ ಕಲಬುರ್ಗಿ ಶ್ರೀ ಶರಣಬಸವೇಶ್ವರ ಪುರಾಣವನ್ನು ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಿ ಗುರುವಾರ ಮಾತನಾಡಿದರು.
ಶರಣಬಸವೇಶ್ವರರು ಸಮಾಜ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿದ್ದಾರೆ. ಅವರ ಆದರ್ಶ ಮತ್ತು ಸರ್ವರು ಸಮಾನರು ಎಂಬ ಗುಣವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಇದನ್ನೂ ಓದಿ: ಆಧುನಿಕ ಯುಗದಲ್ಲಿ ಪ್ರವಚನ ಪುರಾಣಗಳು ಜೀವನಕ್ಕೆ ಹೊಸ ಚೈತನ್ಯ ನೀಡುತ್ತವೆ:ಡಾ.ಭೀಮಾಶಂಕರ ಬಿಲಗುಂದಿ ಅಭಿಮತ
ಪುರಾಣನ ಕಾರ್ಯಕ್ರಮವನ್ನು ಅಮರೇಗೌಡ ಹೊಗರನಾಳ, ಸಂಗೀತ ಬಿ.ಪಿ.ಮರೇಗೌಡ, ತಬಲಾ ಹರ್ಷವರ್ಧನ ಅವರು ನಡೆಸಿಕೊಟ್ಟರು. ಹಿರೇಹಡಗಲಿಯ ಶ್ರೀ ಶಿವಯೋಗಿ ಹಾಲ ಸ್ವಾಮೀಜಿ, ಶ್ರೀ ವಿಶ್ವೇಶ್ವರ ಪಂಡಿತಾರಾದ್ಯ ಹಾಲ ಸ್ವಾಮೀಜಿ,
ಪ್ರಮುಖರಾದ ಚಿಕ್ಕವೀರಜ್ಜ, ಭೀಮರಡ್ಡಿ ಗದ್ದಿಕೇರಿ, ಅಶೋಕ ಬಂಡಿ, ರಮೇಶ, ಉಮೇಶ, ಬಸಯ್ಯ, ನಾಗಪ್ಪ ಮಾಸ್ತರ, ಅಂದಾನಯ್ಯ, ಸಿದ್ದಣ್ಣ, ಜಗನ್ನಾಥರಡ್ಡಿ, ಗೀರಿಶ ಕಣವಿ, ಈಶಪ್ಪ, ಅರವಿಂದಪ್ಪ, ಗವಿಸಿದ್ದಪ್ಪ, ಶಿವಾನಂದಯ್ಯ, ಶಂಭುಲಿಂಗಯ್ಯ, ಮಂಜುನಾಥಗೌಡ ಇದ್ದರು.