

ನಂದೇಶ್ವರ: ಸಮೀಪದ ಸವದಿ ಗ್ರಾಮದ ಶ್ರೀಸಂಗನಬಸವ ಶಿವಯೋಗಿಗಳ 83ನೇ ಸ್ಮರಣೋತ್ಸವ ಹಾಗೂ ಡಾ. ಮಹಾಂತ ಶಿವಯೋಗಿಗಳ 7ನೇ ವರ್ಷದ ಸ್ಮರಣೋತ್ಸವ ಅಂಗವಾಗಿ ಸವದಿ&ಇಳಕಲ್ ಮಠದ ಶ್ರೀಗುರುಮಹಾಂತ ಸ್ವಾಮೀಜಿ ಅಧ್ಯತೆಯಲ್ಲಿ ೆ.28ರಿಂದ ಮಾ.4ರ ವರೆಗೆ ಶರಣ ಸಂಸತಿ ಮಹೋತ್ಸವ ಕಾರ್ಯಕ್ರಮ ಜರುಗಲಿವೆ.
ೆ.28ರಂದು ಬೆಳಗ್ಗೆ 10 ಗಂಟೆಗೆ ಷಟಸ್ಥಳ ಧ್ವಜಾರೋಹಣ, ಸಂಜೆ 6.30ಕ್ಕೆ ಧರ್ಮ ಚಿಂತನ ಗೋಷ್ಠಿ, ಪ್ರತಿಭಾ ಪುರಸ್ಕಾರ ಜರುಗಲಿದೆ. ಮಾ.1ರಂದು ಸಂಜೆ 6.30ಕ್ಕೆ ಕಾರ್ಮಿಕರಿಗೆ ಸನ್ಮಾನ ಕಾರ್ಯಕ್ರಮ ಜರುಗಲಿದ್ದು, ಬಾಲ್ಕಿಯ ಬಸವಲಿಂಗ ಪಟ್ಟದೇವರು, ಧಾರವಾಡ ಮುರುಘಾಮಠದ ಮಲ್ಲಿಕಾರ್ಜುನ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಮಾಜಿ ಶಾಸಕ ಮಹೇಶ ಕುಮಠಳ್ಳಿ ಭಾಗವಹಿಸುವರು.
ಮಾ.2ರಂದು ಸಂಜೆ 6.30ಕ್ಕೆ ಕೃಷಿಗೋಷ್ಠಿ, ನೂರು ರೈತ ದಂಪತಿಗೆ ಸನ್ಮಾನ, ಸತ್ತೆಪ್ಪ ಶರಣ ಪ್ರಶಸ್ತಿ ಸಮಾರಂಭ ಜರುಗಲಿದ್ದು, ನಿಡಸೋಸಿ ಪಂಚಮಲಿಂಗೇಶ್ವರ ಸ್ವಾಮೀಜಿ, ಕೂಡಲಸಂಗಮದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಭಾಗವಹಿಸುವರು. ಮಾ.3ರಂದು ಸಂಜೆ 6.30ಕ್ಕೆ ವಿಶ್ವ ಬಸವ ಧರ್ಮ ಸಮಾವೇಶ, ನೂರು ಶರಣ ದಂಪತಿಗೆ ಸನ್ಮಾನ ಹಾಗೂ ರಾಜ್ಯಮಟ್ಟದ ಡಾ.ಮಹಾಂತಶ್ರೀ ಪ್ರಶಸ್ತಿ ಪ್ರದಾನ ನೆರವೇರಲಿದೆ.
ಗದಗ&ಡಂಬಳದ ಡಾ.ತೋಂಟದ ಸಿದ್ಧರಾಮ ಸ್ವಾಮೀಜಿ, ನಾಗನೂರ ರುದ್ರಾ ಮಠದ ಡಾ.ಅಲ್ಲಮಪ್ರಭು ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಮಾ.4 ರಂದು ಬೆಳಗ್ಗೆ 10 ಗಂಟೆಗೆ ಧರ್ಮಗ್ರಂಥ ಉತ್ಸವ ಜರುಗಲಿದ್ದು, ೂಡಗೇರಿಯ ಮಲ್ಲಯ್ಯ ಸ್ವಾಮೀಜಿ, ಸವದಿ&ಇಳಕಲ್ ಮಠದ ಗುರುಮಹಾಂತ ಸ್ವಾಮೀಜಿ ಸಾನ್ನಿಧ್ಯ ಹಾಗೂ ಶಿರೂರದ ಡಾ.ಬಸವಲಿಂಗ ಶ್ರೀಗಳು ನೇತೃತ್ವ ವಹಿಸಲಿದ್ದಾರೆ. ಸಂಜೆ 6.30ಕ್ಕೆ ಸಾಂಸತಿಕ ಕಾರ್ಯಕ್ರಮ ಜರುಗಲಿದೆ ಎಂದು ಶ್ರೀ ಸಂಗನಬಸವ ಮಠದ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.