ಶರಣರೆಂದರೆ ಸದ್ವಿಚಾರಗಳ ಸಂಗಮ: ಬಿ.ವೈ.ವಿಜಯೇಂದ್ರ

15 ಎಸ್ಕೆಪಿ 6b
ಶಿಕಾರಿಪುರದಲ್ಲಿ ಬಸವ ಆಶ್ರಮದಿಂದ ಬಿ.ವೈ.ವಿಜಯೇಂದ್ರ, ಕೆ.ಎಸ್.ಗುರುಮೂರ್ತಿ ಅವರನ್ನು ಸನ್ಮಾನಿಸಲಾಯಿತು. ಗುರುಬಸವ ಶ್ರೀಗಳು, ಮಾತೆ ಶರಣಾಂಬಿಕೆ, ಎನ್.ವಿ.ಈರೇಶ್, ಸುಧೀರ್ ಮಾರವಳ್ಳಿ, ರುದ್ರಮುನಿ, ರೇಖಾಬಾಯಿ ಮಂಜುಸಿಂಗ್ ಇತರರಿದ್ದರು.
Published on

ಶಿಕಾರಿಪುರ: ತಾಲೂಕು ಅಕ್ಷರಶಃ ಶರಣರ ನಾಡು. ಶರಣರು ನುಡಿದಂತೆ ನಡೆದ ಮಹಾತ್ಮರು. ಕಾಯಕ ದಾಸೋಹ, ಸಹಬಾಳ್ವೆಯ ಮೂಲಕ ಹೊಸ ಮನ್ವಂತರ ಪ್ರಾರಂಭಿಸಿದರು ಎಂದು ಶಾಸಕಬಿ ಬಿ.ವೈ.ವಿಜಯೇಂದ್ರ ಹೇಳಿದರು.

ನಗರದಲ್ಲಿ ಬಸವ ಸೇವಾ ಸಂಸ್ಥೆ ಆಯೋಜಿಸಿದ್ದ 8ನೇ ವರ್ಷದ ಮಹಾಶಿವಶರಣೆ ಶ್ರೀ ದಾನಮ್ಮ ದೇವಿ ಪೂಜೆ ಹಾಗೂ ಪ್ರವಚನದಲ್ಲಿ ಮಾತನಾಡಿ, 12ನೇ ಶತಮಾನದಲ್ಲಿ ಸಾಮಾಜಿಕ ಕ್ರಾಂತಿ ಮಾಡಿದ ಶರಣರು ಎಂದೆಂದಿಗೂ ವಿಶ್ವ ಮಾನ್ಯರು. ಶರಣರೆಂದರೆ ಸದ್ವಿಚಾರಗಳ ಸಂಗಮ. ಸಹನೆ, ಸಂಯಮ, ಸಮತಾ ಭಾವಗಳ ಕುಂಜವಾಗಿದ್ದರು ಎಂದರು.
ದೇವಿಯ ಅವತಾರವೆಂದೇ ಪರಿಗಣಿತವಾದ ಶಿವಶರಣೆ ದಾನಮ್ಮ ದೇವಿ, ಕನ್ನಡ ನೆಲದಲ್ಲಿ ಜನ್ಮಿಸಿ ಅವತರಿಸಿದ್ದು ನಮ್ಮೆಲ್ಲರ ಸೌಭಾಗ್ಯ. ಶಿಕಾರಿಪುರ ಎಂದರೆ ಒಂದು ಕುಟುಂಬ, ಒಂದೇ ಮನಸ್ಸು, ಒಂದೇ ಸಮಾಜ ಎಂಬ ಭಾವ ಪ್ರತಿಯೊಬ್ಬರಲ್ಲೂ ಮೂಡಬೇಕು. ಆ ಮೂಲಕ ಇಡೀ ರಾಜ್ಯದಲ್ಲಿ ಶಿಕಾರಿಪುರ ಮಾದರಿಯಾಗುವ ನಿಟ್ಟಿನಲ್ಲಿ ನಾವೆಲ್ಲ ಹೆಗಲಿಗೆ ಹೆಗಲು ಕೊಟ್ಟು ಶರಣ ಸಂಸ್ಕೃತಿಗಳನ್ನು ಜನರಿಗೆ ತಲುಪಿಸಬೇಕೆಂದು ಮನವಿ ಮಾಡಿದರು.
ಸಾನ್ನಿಧ್ಯವನ್ನು ಚನ್ನಗಿರಿಯ ವಿರಕ್ತಮಠದ ಗುರುಬಸವ ಶ್ರೀಗಳು, ಮಾತೆ ಶರಣಾಂಬಿಕೆ ವಹಿಸಿದ್ದರು. ಮಲೆನಾಡು ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಕೆ.ಎಸ್.ಗುರುಮೂರ್ತಿ, ತಾಲೂಕು ವೀರಶೈವ ಮಹಾಸಭಾದ ಅಧ್ಯಕ್ಷ ಎನ್.ವಿ.ಈರೇಶ್, ಸುಧೀರ್ ಮಾರವಳ್ಳಿ, ರುದ್ರಮುನಿ, ರೇಖಾಬಾಯಿ ಮಂಜುಸಿಂಗ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net