ಪರಮಾತ್ಮನಿಗೆ ಸಂಪೂರ್ಣ ಸಮರ್ಪಿಸಿಕೊಳ್ಳಿ

Surrender completely to God
Surrender completely to God
Published on

ಲೋಕಾಪುರ: ನಮ್ಮನ್ನು ಸರ್ವಾಂಗೀಣ ಉನ್ನತಿಯತ್ತ ಯಾವುದು ಸೆಳೆದುಯ್ಯುತ್ತದೆಯೋ ಅದೇ ನಿಜವಾದ ಧರ್ಮ ಎಂದು ಬಿಂದುಮಾಧವಚಾರ್ಯ ನಾಗಸಂಪಗಿ ಹೇಳಿದರು.

ಪಟ್ಟಣದ ಕಾಡರಕೊಪ್ಪ ರಸ್ತೆಯ ವೆಂಕಟೇಶ್ವರ ನಗರದ ಶಂಭುಲಿಂಗಾನಂದ ಆಶ್ರಮದಲ್ಲಿ ಆಯೋಜಿಸಿದ್ದ 27ನೇ ಶಂಭುಲಿಂಗಾನಂದ ಪುಣ್ಯಾರಾಧನೆಯ ನಿಮಿತ್ತ ಹಮ್ಮಿಕೊಂಡಿದ್ದ ಸತ್ಸಂಗ ಸಮ್ಮೇಳನದಲ್ಲಿ ಮಾತನಾಡಿದ ಅವರು, ದೈನಂದಿನ ಕಾರ್ಯಗಳನ್ನು ್ತಶ್ರದ್ಧೆಯಿಂದ ಮಾಡಬೇಕು. ಪರಮಾತ್ಮನಿಗೆ ಸಂಪೂರ್ಣ ಸಮರ್ಪಿಸಿಕೊಳ್ಳಬೇಕು ಎಂದರು.

ಲಕ್ಷಾನಟ್ಟಿ ಜ್ಞಾನಯೋಗಾಶ್ರಮದ ಶಿವಾನಂದ ಸ್ವಾಮಿಗಳು ಮಾತನಾಡಿ, ಭಕ್ತಿ ಸೂತ್ರ, ಧರ್ಮಸೂತ್ರ ಹಾಗೂ ಬ್ರಹ್ಮಸೂತ್ರಗಳ ಮೂಲಕ ಭಗವಂತನ ನಾಮ ಸ್ಮರಣೆ ಸಾಧ್ಯ ಎಂದರು.

ದಾದನಟ್ಟಿ ಗ್ರಾಮದ ನಿಜಾನಂದ ಸ್ವಾಮೀಜಿ ಮಾತನಾಡಿ, ಭಗವಂತನ ನಾಮಸ್ಮರಣೆಯಿಂದ ಮನಸ್ಸಿಗೆ ಶಾಂತಿ, ನೆಮ್ಮದಿ ದೊರಕುತ್ತದೆ ಎಂದರು.

ಕಾಡರಕೊಪ್ಪದ ದಯಾನಂದ ಸರಸ್ವತಿ ಸ್ವಾಮೀಜಿ, ಶಿವಾನಂದ ಸ್ವಾಮೀಜಿ, ಬಸವರಾಜ ಸ್ವಾಮೀಜಿ, ಕೃಷ್ಣಾನಂದ ಶಾಸೀಜಿ, ಅಡವೇಶ ಶಾಸೀಗಳು, ಮಠದ ಆಡಳಿತ ಮಂಡಳಿ ಅಧ್ಯಕ್ಷ ಬಸನಗೌಡ ಪಾಟೀಲ, ಕೆ.ಎಸ್. ಪಾಟೀಲ, ಸದಾಶಿವ ಹಗ್ಗದ, ಬಸವರಾಜ ಉದಪುಡಿ, ನಾರಾಯಣ ಪಾಟೀಲ, ಮಹೇಶ ಮಳಲಿ, ತಮ್ಮಣ್ಣ ಬಡಕಲಿ, ಮಲ್ಲಪ್ಪ ಬೂಸರಡ್ಡಿ, ಎಚ್.ಬಿ. ಪಾಟೀಲ, ಎಸ್.ಆರ್. ಪಾಟೀಲ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net