ಮಾರಾಟಕ್ಕೆ ಹಂದಿ ತಂದ ಕುಟುಂಬಕ್ಕೆ ಕಾದಿತ್ತೊಂದು ಅಚ್ಚರಿ

pig
Published on

ಕೋಲಾರ: ಚಿಕ್ಕಬಳ್ಳಾಪುರ ಎಚ್.ಕ್ರಾಸ್​ನಿಂದ ಹಂದಿ ತಂದ ವ್ಯಾಪಾರಿ ಸೇರಿ ಕುಟುಂಬದ ನಾಲ್ವರನ್ನು ಗುರುವಾರ ರಾತ್ರಿ ಹೋಂ ಕ್ವಾರಂಟೈನ್ ಮಾಡಲಾಗಿದೆ.

ತೊಟ್ಲಿ-ಚಿಟ್ನಹಳ್ಳಿ ಮಾರ್ಗದ ಮಾಂಸ ಮಾರಾಟಗಾರರೊಬ್ಬರು ಎಚ್.ಕ್ರಾಸ್​ನಿಂದ ಗುರುವಾರ ಸಂಜೆ 34 ಹಂದಿಗಳನ್ನು ತಂದಿದ್ದಾರೆ. ವಿಷಯ ತಿಳಿದ ಗ್ರಾಮಸ್ಥರು ಕರೊನಾದಿಂದ ಸಾವು ಸಂಭವಿಸಿರುವ ಚಿಕ್ಕಬಳ್ಳಾಪುರದಿಂದ ಹಂದಿ ತಂದಿರುವುದು ಎಷ್ಟು ಸರಿ ಎಂದು ಹಂದಿಗಳನ್ನು ಹೊರಗೆ ಸಾಗಿಸುವಂತೆ ಪಟ್ಟು ಹಿಡಿದರು.

ಪಶುವೈದ್ಯಾಧಿಕಾರಿಗಳು ಹಂದಿಗಳ ತಪಾಸಣೆ ನಡೆಸಿದರಲ್ಲದೆ, ಸುಗಟೂರು ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಮುನ್ನೆಚ್ಚರಿಕೆಯಾಗಿ ಮಾಂಸ ಮಾರಾಟಗಾರ ಸೇರಿ ಕುಟುಂಬದ ನಾಲ್ವರನ್ನು ಹೋಂ ಕ್ವಾರಂಟೈನ್​ಗೆ ಸೂಚಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net