

ಬೆಂಗಳೂರು: ಸೂಕ್ಷ್ಮ ಹಾಗೂ ಸಣ್ಣ ಉದ್ದಿಮೆದಾರರ ಸಬಲೀಕರಣದಲ್ಲಿ ತೊಡಗಿಸಿಕೊಂಡಿರುವ ಲಘು ಉದ್ಯೋಗ ಭಾರತಿ ಸಂಘಟನೆಯ ಬೆಂಗಳೂರು ಉತ್ತರ ವಿಭಾಗದಿಂದ ಬೆಂಗಳೂರಿನ ಅರಮನೆ ಮೈದಾನದ ಗ್ರ್ಯಾಂಡ್ ಕ್ಯಾಸಲ್ (ಗೇಟ್ ನಂ.6) ಸಭಾಂಗಣದಲ್ಲಿ ಈ ತಿಂಗಳ 26ರಿಂದ ಮೂರು ದಿನ ‘ಸರ್ಫೇಸ್ ಎಕ್ಸ್‌ಪೊ-2024’ ಮೇಳವನ್ನು ಆಯೋಜಿಸಲಾಗಿದೆ.
ಮೊದಲ ದಿನದಂದು ಮೇಳವನ್ನು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಉದ್ಘಾಟಿಸಲಿದ್ದಾರೆ. ಮೂರು ದಿನವೂ ಉದ್ಯಮ ಬೆಳವಣಿಗೆ ಸಂಬಂಧ ತಜ್ಞರು, ತಾಂತ್ರಿಕ ಪರಿಣಿತರು ಸಂಬಂಧಿಸಿದ ಉದ್ದಿಮೆದಾರರೊಂದಿಗೆ ಚರ್ಚೆ, ಸಂವಾದ ನಡೆಸಲಿದ್ದಾರೆ. ವೈಮಾನಿಕ, ಎಲೆಕ್ಟ್ರಾನಿಕ್ಸ್, ಪ್ಯಾಕೇಜಿಂಗ್, ಪೇಂಟಿಂಗ್ ಸೇರಿ ಇತರ ಕ್ಷೇತ್ರಗಳಲ್ಲಿ ಉತ್ಪಾದನೆಯಲ್ಲಿ ತೊಡಗಿಸಿಕೊಂಡಿರುವ ಉದ್ದಿಮೆದಾರರು ತಯಾರಿಸಿರುವ ಉತ್ಪನ್ನಗಳ ಪ್ರದರ್ಶನವೂ ಇರಲಿದೆ ಎಂದು ಸಂಸ್ಥೆಯ ಅಧ್ಯಕ್ಷ ಸಂಜಯ್ ಪಿ. ಭಟ್ ತಿಳಿಸಿದ್ದಾರೆ.