ಸುರೇಶ ಅಂಗಡಿ ಸಜ್ಜನ ರಾಜಕಾರಣಿ

24blh3 v i patil-Web
ದಿ. ಸುರೇಶ ಅಂಗಡಿ ಅವರಿಗೆ ಮಾಜಿ ಶಾಸಕ ಡಾ.ವಿಶ್ವನಾಥ ಪಾಟೀಲ, ಪಕ್ಷದ ಕಾರ್ಯಕರ್ತರು ಗುರುವಾರ ಶ್ರದ್ಧಾಂಜಲಿ ಸಲ್ಲಿಸಿದರು. ಐ.ಎಲ್.ಪಾಟೀಲ, ಮಡಿವಾಳಪ್ಪ ಚಳಕೊಪ್ಪ, ಬಸವರಾಜ ನೇಸರಗಿ, ಮಡಿವಾಳಪ್ಪ ಹೋಟಿ, ಮಹೇಶ ಹರಕುಣಿ, ಮುರಗೇಶ ಗುಂಡ್ಲೂರ ಇತರರಿದ್ದರು.
Published on

ಬೈಲಹೊಂಗಲ: ಜಿಲ್ಲೆಯ ಸಾಮಾನ್ಯ ಕಾರ್ಯಕರ್ತರಾಗಿ, ಹಳ್ಳಿಯಲ್ಲಿ ಜನಿಸಿ ದಿಲ್ಲಿಯವರೆಗೆ ಜನಸಾಮಾನ್ಯರ ಪ್ರತಿನಿಧಿಯಾಗಿ, ರೈಲ್ವೆ ಇಲಾಖೆಯ ರಾಜ್ಯ ಖಾತೆ ಸಚಿವರಾಗಿ ಅಭಿವೃದ್ಧಿ ಕಾರ್ಯಗಳಿಂದ ಗಮನ ಸೆಳೆದಿದ್ದ ಸುರೇಶ ಅಂಗಡಿ ಅವರನ್ನು ಕಳೆದುಕೊಂಡು ಬೆಳಗಾವಿ ಜಿಲ್ಲೆ ಇಂದು ಬಡವಾಗಿದೆ ಎಂದು ಮಾಜಿ ಶಾಸಕ ಡಾ.ವಿಶ್ವನಾಥ ಪಾಟೀಲ ಭಾವುಕರಾಗಿ ಸಂತಾಪ ವ್ಯಕ್ತಪಡಿಸಿದ್ದಾರೆ.

ಪಟ್ಟಣದ ತಮ್ಮ ಗೃಹ ಕಚೇರಿ ಕಾರ್ಯಾಲಯದಲ್ಲಿ ದಿ.ಸುರೇಶ ಅಂಗಡಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿ ಮಾತನಾಡಿ, ಅಂಗಡಿ ಅವರು ಬಿಜೆಪಿಯ ಶಿಸ್ತಿನ ಸಿಪಾಯಿಯಾಗಿ ತಳಮಟ್ಟದ ಕಾರ್ಯಕರ್ತರಾಗಿ ಉನ್ನತ ಹುದ್ದೆ ಸ್ವೀಕರಿಸಿದ ಬೆಳಗಾವಿಯ ಏಕೈಕ ಸಂಸದ. ಸರಳ, ಸಜ್ಜನ ಸಾಮನ್ಯ ರಾಜಕೀಯ ನಾಯಕನ ಅಗಲಿಕೆಯಿಂದ ಜಿಲ್ಲೆ ಹಾಗೂ ರಾಜ್ಯಕ್ಕೆ ತುಂಬಲಾರದ ನಷ್ಟವಾಗಿದೆ. ರಾಜ್ಯಕ್ಕೆ ಅನೇಕ ಯೋಜನೆಗಳನ್ನು ಕೊಡಮಾಡಿದ ಸುರೇಶ ಅಂಗಡಿ ಅವರು ಜನಮಾನಸದಲ್ಲಿ ಸದಾ ಉಳಿಯಲಿದ್ದಾರೆ ಎಂದು ಅಂಗಡಿ ಅವರ ಕಾರ್ಯವನ್ನು ಸ್ಮರಿಸಿದರು.

ಐ.ಎಲ್.ಪಾಟೀಲ, ಮಡಿವಾಳಪ್ಪ ಚಳಕೊಪ್ಪ, ಬಸವರಾಜ ನೇಸರಗಿ, ಮಡಿವಾಳಪ್ಪ ಹೋಟಿ, ಮಹೇಶ ಹರಕುಣಿ, ಮುರಗೇಶ ಗುಂಡ್ಲೂರ, ವಿಶಾಲ ಹೊಸೂರ, ಆನಂದ ಮೂಗಿ, ಮಡಿವಾಳಪ್ಪ ಚಿಕ್ಕೊಪ್ಪ, ಸುನೀಲ ಈಟಿ, ಮಾರುತಿ ತಿಗಡಿ, ಜಗದೀಶ ಜಂಬಗಿ, ಶಿವಾನಂದ ಕೋಲಕಾರ ಮತ್ತಿತರರು ಇದ್ದರು.

ಗಣ್ಯರಿಂದ ಸಂತಾಪ: ಸಚಿವ ಸುರೇಶ ಅಂಗಡಿ ಅವರ ನಿಧನಕ್ಕೆ ಗಣ್ಯರು, ಮಠಾಧೀಶರು ಸಂತಾಪ ಸೂಚಿಸಿದ್ದಾರೆ. ಮುರಗೋಡದ ನೀಲಕಂಠ ಶ್ರೀ, ಶಿವಾನಂದ ಮಠದ ಮಹಾದೇವ ಸರಸ್ವತಿ ಶ್ರೀ, ಸಂಗೊಳ್ಳಿಯ ಗುರುಲಿಂಗ ಶಿವಾಚಾರ್ಯ ಶ್ರೀ, ಶಾಖಾ ಮೂರುಸಾವಿರ ಮಠದ ಪ್ರಭುನೀಲಕಂಠ ಶ್ರೀ, ರುದ್ರಾಕ್ಷಿಮಠದ ಬಸವಲಿಂಗ ಶ್ರೀ, ಹೊಸೂರ ಮಡಿವಾಳೇಶ್ವರ ಶ್ರೀ, ಮಡಿವಾಳೇಶ್ವರ ಮಠದ ಮಡಿವಾಳೇಶ್ವರ ಶ್ರೀ, ಮಾಜಿ ಕೇಂದ್ರ ಸಚಿವ ಬಾಬಾಗೌಡ ಪಾಟೀಲ, ಮಾಜಿ ಸಂಸದ ಶಿವಾನಂದ ಕೌಜಲಗಿ, ಶಾಸಕ ಮಹಾಂತೇಶ ಕೌಜಲಗಿ, ಮಾಜಿ ಶಾಸಕರಾದ ಡಾ.ವಿಶ್ವನಾಥ ಪಾಟೀಲ, ಜಗದೀಶ ಮೆಟಗುಡ್ಡ, ಕೆಎಲ್ಇ ನಿರ್ದೇಶಕರಾದ ಡಾ. ವಿ.ಎಸ್.ಸಾಧುನವರ, ಎಸ್.ಸಿ.ಮೆಟಗುಡ್ಡ ಸಂತಾಪ ಸೂಚಿಸಿದ್ದಾರೆ.

ಮೂಡಲಗಿ ವರದಿ: ಸುರೇಶ ಅಂಗಡಿ ಅವರ ನಿಧನದ ಹಿನ್ನೆಲೆಯಲ್ಲಿ ಪಕ್ಷದ ಕಾರ್ಯಕರ್ತರು ಪಟ್ಟಣದ ಕಲ್ಮೇಶರ ವೃತ್ತದಲ್ಲಿ ಶ್ರದ್ಧಾಂಜಲಿ ಸಲ್ಲಿಸಿದರು. ಸುಭಾಷ ಢವಳೇಶ್ವರ, ಪ್ರಕಾಶ ಮದರ, ಮಲ್ಲಪ್ಪ ಮದಗುಣಕಿ, ಮಹಾದೇವ ಶೆಕ್ಕಿ, ಮಲ್ಲಪ್ಪ ನೇಮಗೌಡ್ರ, ರವೀಂದ್ರ ಸಣ್ಣಕ್ಕಿ, ಸುಭಾಷ ಸಣ್ಣಕ್ಕಿ ಮತ್ತಿತರರು ಇದ್ದರು.

ಆಧ್ಯಾತ್ಮಿಕತೆಯ ವ್ಯಕ್ತಿಯಾಗಿದ್ದ ಸಂಸದ ಸುರೇಶ ಅಂಗಡಿ ಅವರು ಜಿಲ್ಲೆಯಲ್ಲಿ ಅನೇಕ ದೇವಸ್ಥಾನ, ಮಠ-ಮಾನ್ಯಗಳ ಅಭಿವೃದ್ಧಿಗೆ ಸಹಾಯ ನೀಡಿದ್ದು ಅವರ ಧಾರ್ಮಿಕ ಆಸಕ್ತಿಗೆ ಹಿಡಿದ ಕನ್ನಡಿಯಾಗಿತ್ತು. ಅನೇಕ ಅಭಿವೃದ್ಧಿ ಕಾರ್ಯ ಕೈಗೊಂಡು ರಾಜ್ಯದ ಉನ್ನತ್ತಿಗೆ ಕನಸು ಕಟ್ಟಿಕೊಂಡಿದ್ದ ಅವರ ನಿಧನದಿಂದ ಬೆಳಗಾವಿ ಜಿಲ್ಲೆ, ರಾಜ್ಯಕ್ಕೆ ಹಾನಿಯುಂಟಾಗಿದೆ. ದೇವರು ಅವರ ಕುಟುಂಬಕ್ಕೆ ದು:ಖ ಸಹಿಸುವ ಶಕ್ತಿ ನೀಡಲಿ.| ಡಾ.ಶಿವಾನಂದ ಭಾರತಿ ಸ್ವಾಮೀಜಿ, ಸುಕ್ಷೇತ್ರ ಇಂಚಲ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net