ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷರಾಗಿ ಸುರೇಶ ಶೆಡಶ್ಯಾಳ- ಖಜಾಂಚಿಯಾಗಿ ಸೈಯದ್ ಆಯ್ಕೆ

SARAKARI NOUKARARA SANGHA ELECTION
ವಿಜಯಪುರದ ರಾಜ್ಯ ನೌಕರರ ಸಂಘದ ಜಿಲ್ಲಾ ಘಟಕಕ್ಕೆ ಆಯ್ಕೆಯಾದ ಸುರೇಶ ಶಡಶ್ಯಾಳ ಮತ್ತು ಸೈಯದ ಜುಬೇರ ಕೆರೂರ ಅವರನ್ನು ಸಂಘದ ಪದಾಧಿಕಾರಿಗಳು ಸನ್ಮಾನಿಸಿದರು. ಎಸ್.ಎನ್. ಪಡಶೆಟ್ಟಿ, ಅಜೀಜ ಹಳ್ಳಿಮಟ್ಟಿ ಮತ್ತಿತರರಿದ್ದಾರೆ.
Published on

ವಿಜಯಪುರ: ರಾಜ್ಯ ಸರಕಾರಿ ನೌಕರರ ಸಂಘದ ಜಿಲ್ಲಾ ಘಟಕಕ್ಕೆ 2024-29 ನೇ ಸಾಲಿನ ಅವಧಿಗೆ ಬುಧವಾರ ನಡೆದ ಜಿಲ್ಲಾ ಕಾರ್ಯಕಾರಿಣಿ ಪದಾಧಿಕಾರಿಗಳ ಚುನಾವಣೆಯಲ್ಲಿ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಸುರೇಶ ಶಡಶ್ಯಾಳ ಮತ್ತು ಜಿಲ್ಲಾ ಖಜಾಂಚಿ ಸ್ಥಾನಕ್ಕೆ ಸೈಯದ ಜುಬೇರ ಕೆರೂರ ಅವಿರೋಧವಾಗಿ ಆಯ್ಕೆಯಾದರು.

ಕಳೆದ ಅ. 28 ರಂದ ರಿಂದ ಪ್ರಾರಂಭವಾದ ಚುನಾವಣಾ ಪ್ರಕ್ರಿಯೆಯಲ್ಲಿ ಜಿಲ್ಲಾ ಕಾರ್ಯಕಾರಿಣಿ ಸಮಿತಿಗೆ ಒಟ್ಟು 66 ಸ್ಥಾನಗಳಲ್ಲಿ 60 ಸ್ಥಾನಗಳ ಅಭ್ಯರ್ಥಿಗಳು ಅವರೋಧವಾಗಿ ಆಯ್ಕೆಯಾಗಿದ್ದರು. ಇನ್ನೂಳಿದ 6 ಸ್ಥಾನಗಳಿಗೆ ಚುನಾವಣೆ ನಡೆದು ಸುರೇಶ ಶಡಶ್ಯಾಳ ಹಾಗೂ ಜುಬೇರ ಕೆರೂರ ಇವರ ಪೆನಲ್‌ದಿಂದ ಹೆಚ್ಚಿನ ನಿರ್ದೇಶಕರು ಆಯ್ಕೆಯಾದ ಹಿನ್ನೆಲೆ ಜಿಲ್ಲಾಧ್ಯಕ್ಷ ಹಾಗೂ ಖಜಾಂಚಿ ಸ್ಥಾನಕ್ಕೆ ಯಾವುದೇ ವಿರೋಧಿ ಬಣ ಇರಲಿಲ್ಲ. ಕಳೆದ 5 ವರ್ಷಗಳಲ್ಲಿ ನೌಕರರ ಸಮಸ್ಯೆಗಳಿಗೆ ಸ್ಪಂದಿಸುವ ಜತೆಗೆ ಸಂಘವನ್ನು ಅತ್ಯಂತ ಕ್ರೀಯಾಶೀಲವಾಗಿ ನಡೆಸಿಕೊಂಡ ಬಂದಿದ್ದ ಸುರೇಶ ಶಡಶ್ಯಾಳ ಹಾಗೂ ಸೈಯದ ಜುಬೇರ ಕೆರೂರ ಮತ್ತೊಂದು ಅವಧಿಗೆ ಜಿಲ್ಲೆಯ ಸರಕಾರಿ ನೌಕರರು ಕ್ರಮವಾಗಿ ಜಿಲ್ಲಾಧ್ಯಕ್ಷ ಮತ್ತು ಖಜಾಂಚಿ ಹುದ್ದೆಗಳಿಗೆ ಅವಿರೋಧವಾಗಿ ಪುನರಾಯ್ಕೆಯಾದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net