

ಹುಬ್ಬಳ್ಳಿ: ಅಸೋಸಿಯೇಶನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ಸ್ (ಎಸಿಸಿಇ) ಇಂಡಿಯಾ ಇದರ ಆಡಳಿತ ಮಂಡಳಿಗೆ ದಕ್ಷಿಣ ಭಾರತದಿಂದ ಸದಸ್ಯರಾಗಿ ಹುಬ್ಬಳ್ಳಿಯ ಸುರೇಶ ಕಿರೇಸೂರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
2025-27ನೇ ಅವಧಿಗೆ ಈ ಆಯ್ಕೆ ನಡೆದಿದೆ. ಸುರೇಶ ಕಿರೇಸೂರ ಅವರು ಎಸಿಸಿಇ ಹುಬ್ಬಳ್ಳಿಗೆ 5 ಸಲ ಅಧ್ಯಕ್ಷರಾಗಿದ್ದರು. ಎಸಿಸಿಇ ಇಂಡಿಯಾ ಹುಬ್ಬಳ್ಳಿ ಸೆಂಟರ್ಗೆ 2 ಬಾರಿ ಚೇರ್ಮನ್ ಆಗಿದ್ದರು.