ಸುರೇಶ್‌ಗೌಡ ಬಿದರೆ ಗ್ರಾಪಂ ಅಧ್ಯಕ್ಷ

bhr gp
ಬಾಳೆಹೊನ್ನೂರು ಸಮೀಪದ ಬಿದರೆ ಗ್ರಾಪಂ ಅಧ್ಯಕ್ಷ ಎಸ್.ಸುರೇಶ್ ಗೌಡ, ಉಪಾಧ್ಯಕ್ಷೆ ಯಶೋದಾ ಅವರನ್ನು ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಅಭಿನಂದಿಸಿದರು. ಬಿ.ಸಿ.ಮಂಜುನಾಥ್, ರತ್ನಾಕರ್ ಬೆಳಸೆ, ಸತೀಶ್, ವಿನಯ್, ಚೇತನ್ ಇತರರಿದ್ದರು.
Published on

ಬಾಳೆಹೊನ್ನೂರು: ಖಾಂಡ್ಯ ಹೋಬಳಿ ಬಿದರೆ ಗ್ರಾಪಂ ಅಧ್ಯಕ್ಷರಾಗಿ ಎಸ್.ಸುರೇಶ್ ಗೌಡ, ಉಪಾಧ್ಯಕ್ಷರಾಗಿ ಯಶೋದಾ ಮಂಜು ಶುಕ್ರವಾರ ಅವಿರೋಧವಾಗಿ ಆಯ್ಕೆಯಾದರು.

ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಎಸ್.ಸುರೇಶ್‌ಗೌಡ, ಮಹಿಳೆಗೆ ಮೀಸಲಾಗಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ಯಶೋದಾ ಮಾತ್ರ ನಾಮಪತ್ರ ಸಲ್ಲಿಸಿದ್ದರು. ನೂತನ ಅಧ್ಯಕ್ಷ ಎಸ್.ಸುರೇಶ್ ಗೌಡ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿ, ಗ್ರಾಮದ ಅಭಿವೃದ್ಧಿ ಕಾರ್ಯಗಳನ್ನು ಮಾಡಲು ಬದ್ಧನಿದ್ದು, ಎಲ್ಲ ಸದಸ್ಯರು, ಸಾರ್ವಜನಿಕರ ಸಹಕಾರ ಪಡೆದು ಕಾರ್ಯನಿರ್ವಹಿಸಲಾಗುವುದು ಎಂದರು.ಖಾಂಡ್ಯ ಹೋಬಳಿ ಕಾಂಗ್ರೆಸ್ ಅಧ್ಯಕ್ಷ ಬಿ.ಸಿ.ಮಂಜುನಾಥ್, ಮುಖಂಡರಾದ ರತ್ನಾಕರ್ ಬೆಳಸೆ, ಎಸ್.ಪೇಟೆ ಸತೀಶ್, ವಿನಯ್ ಉಜ್ಜಿನಿ, ಚೇತನ್ ವಸ, ವಿ.ಸಿ.ರಘುಪತಿ ಬಿದರೆ, ಗಣೇಶ್ ಎಸ್.ಪೇಟೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net