

ವಿಜಯಪುರ: ಹೇಮರಡ್ಡಿ ಮಲ್ಲಮ್ಮ ಸಹನೆ ಹಾಗೂ ತ್ಯಾಗದ ಪ್ರತಿಕವಾಗಿದ್ದಳು. ತನ್ನ ಕೌಟುಂಬಿಕ ಸಮಸ್ಯೆಗಳನ್ನು ಮೆಟ್ಟಿನಿಂತು ಬದುಕಿನ ಆದರ್ಶ ಮೌಲ್ಯಗಳನ್ನು ರೂಢಿಸಿಕೊಳ್ಳುವ ಮೂಲಕ ಧಾರ್ಮಿಕ ಸಾಧನೆಗೈದು ಶ್ರೇಷ್ಠರಾದಳು ಎಂದು ಶಿವಶರಣೆ ಹೇಮರಡ್ದಿ ಮಲ್ಲಮ್ಮ ಸಂಸ್ಥೆ ಅಧ್ಯಕ್ಷ ಸುರೇಶ ದೇಸಾಯಿ ಹೇಳಿದರು.
ನಗರದ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಮಂಗಲ ಕಾರ್ಯಾಲಯದಲ್ಲಿ ಶನಿವಾರ ಹಮ್ಮಿಕೊಂಡ ದತ್ತಿ ದಾನಿ ಅಧ್ಯಕ್ಷರು ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಸಂಸ್ಥೆ ಹಾಗೂ ದಿ. ಕೆ.ಜಿ. ಬಾಗಿ ಸ್ಮರಣಾರ್ಥ ದತ್ತಿ. ದತ್ತಿ ದಾನಿ ಶಿವಕುಮಾರ ಬಾಗಿ ದತ್ತಿನಿಧಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ದಾಸ ಸಾಹಿತ್ಯ ಅತ್ಯಂತ ಶ್ರೇಷ್ಠ ಸಾಹಿತ್ಯವಾಗಿದೆ. ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ದಾಸ ಸಾಹಿತ್ಯದ ಕೊಡುಗೆ ಅಪಾರ ಎಂದರು.
ಸಾಹಿತಿ ಇಂದಿರಾ ಬಿದರಿ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಕುರಿತು ಉಪನ್ಯಾಸ ನೀಡಿ, ಮಲ್ಲಮ್ಮ ಕಷ್ಟಗಳ ಸರಮಾಲೆ ಎದುರಿಸಿದರೂ ಬದುಕುವ ಛಲ ಬಿಡಲಿಲ್ಲ. ಸಹನೆಯಿಂದ ಆಧ್ಯಾತ್ಮಿಕ ಚಿಂತನೆಗಳ ಮೂಲಕ ತನ್ನ ಜೀವನದ ಪಾವನಮಾಡಿಕೊಂಡಳು. ಭೋಗಿ ಜೀವನ್ಕಕೆ ಬಲಿಯಾದ ವೇಮನನ್ನು ಯೋಗಿಯನ್ನಾಗಿ ಮಾಡಿ ಮಲ್ಲಮ್ಮ ತನ್ನ ಕೊನೆಯ ದಿನಗಳನ್ನು ಶ್ರೀಶೈಲ ಮಲ್ಲಿಕಾರ್ಜುನ ಸನ್ನಿಧಿಯಲ್ಲಿ ಕಳೆದು ಮೋಕ್ಷ ಪಡೆದಳು ಎಂದರು.
ತಾಲೂಕ ಕಸಾಪ ಅಧ್ಯಕ್ಷ ಡಾ. ಆನಂದ ಕುಲಕರ್ಣಿ ದಾಸ ಸಾಹಿತ್ಯ ಕುರಿತು ಉಪನ್ಯಾಸ ನೀಡಿ, ಪುರಂದರದಾಸರು ಶ್ರೀಕೃಷ್ಣನ ಭಕ್ತರು. ಕವಿ ಹಾಗೂ ಸಂಗೀತಕರರಾಗಿ ಲಕ್ಷಗಟ್ಟಲೆ ಹಾಡುಗಳನ್ನು ಬರೆದು ಕನ್ನಡ ದಾಸ ಸಾಹಿತ್ಯದ ಶ್ರೇಷ್ಠ ಎನಿಸಿಕೊಂಡರು. ದಾಸ ಸಾಹಿತ್ಯವನ್ನು ಊರೂರು ಸುತ್ತುವ ಮೂಲಕ ಕೀರ್ತನೆ ಮಾಡಿದರು. ದಾಸರ ಪದಗಳಲ್ಲಿ ಮಾನವೀಯ ಮೌಲ್ಯಗಳು ಅಡಗಿದ್ದು, ಮಡಿವಂತಿಕೆಯನ್ನು ಖಂಡಿಸಿದ್ದಾರೆ. ಅವರ ಕೀರ್ತನೆಗಳಲ್ಲಿ ನೀತಿ, ತತ್ವ ಮತ್ತು ಸಂಗೀತದ ಸಂಗಮ ಕಾಣುತ್ತೇವೆ. ಅಲ್ಲದೆ, ಅವರನ್ನು ಕರ್ನಾಟಕ ಸಂಗೀತ ಪಿತಾಮಹ ಎಂದು ಕರೆಯುತ್ತಾರೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಕಸಾಪ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲಿಕಾರ, ಗುರು ಬಿರಾದಾರ, ಶಿವಕುಮಾರ ಬಾಗಿ ಮತ್ತು ಅಲಿಸಾಬ ಖಡಕೆ ಮಾತನಾಡಿದರು. ಚಂದ್ರಶೇಖರ ಮಲಘಾಣ, ರಾಜೇಸಾಬ ಶಿವನಗುತ್ತಿ ಹಾಗೂ ಬಸವರಾಜ ಕೊನರಡ್ಡಿ ವೇದಿಕೆಯಲ್ಲಿದ್ದರು.
ಶಾರದಾಬಾಯಿ ಪಾಟೀಲ. ಸಂಧ್ಯಾರಾಣಿ ಬೈರವ್ವಾಡಗಿ. ತೇಜಸ್ವಿನಿ ಒಲೇಕಾರ, ವಿ.ಬಿ. ಹಾದಿಮನಿ, ಸುನಂದಾ ಘಾಟಗೆ, ಬಸವರಾಜ ಡಿ., ಸದಾಶಿವ ಹೂಟಿ, ಪರಸಪ್ಪಾ ಕವಟಗಿ, ಜಿ.ಎಸ್. ಬಳ್ಳೂರ, ಶ್ರೀಕಾಂತ ನಾಡಗೌಡ, ಗುರನಗೌಡ ಬಿರಾದಾರ, ರುದ್ರಗೌಡ ಬಿರಾದಾರ, ಶ್ರೀಕಾಂತ ನಾಡಗೌಡ, ಸಂಗನಗೌಡ ಬಿರಾದಾರ ಮತ್ತಿತರರಿದ್ದರು.