

ಮಂಗಳೂರು: ಸುರತ್ಕಲ್ ಅಕ್ರಮ ಟೋಲ್ ಗೇಟ್ ತೆರವಿನ ದಿನಾಂಕ ಘೋಷಿಸಲು ಒತ್ತಾಯಿಸಿ ಮಂಗಳವಾರ ಸುರತ್ಕಲ್ ಟೋಲ್ ಗೇಟ್ ಮುಂಭಾಗ ಬೃಹತ್ ಒಂದು ಸಾಮೂಹಿಕ ಧರಣಿ ನಡೆಯಿತು.
ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ಸಂಚಾಲಕ ಮುನೀರ್ ಕಾಟಿಪಳ್ಳ, ಮಾಜಿ ಉಪ ಮೇಯರ್ ಪುರುಷೋತ್ತಮ ಚಿತ್ರಾಪುರ, ಮಾಜಿ ಕಾರ್ಪೊರೇಟರ್ ಗಳಾದ ಪ್ರತಿಭಾ ಕುಳಾಯಿ, ಅಯಾಝ್ ಕೃಷ್ಣಾಪುರ, ಡಿವೈಎಫ್ಐ ಮುಖಂಡರಾದ ಬಿ ಕೆ ಇಮ್ತಿಯಾಜ್, ಶ್ರೀನಾಥ್ ಕುಲಾಲ್, ನೌಷದ್ ಬೆಂಗ್ರೆ, ಹನೀಫ್, ಶೈಪರ್ ಅಲಿ, ಮೂಲ್ಕಿ ಲಾರಿ ಮಾಲಕರ ಸಂಘದ ಉಪಾಧ್ಯಕ್ಷ ಮೂಸಬ್ಬ ಪಕ್ಷಿಕೆರೆ, ಬ್ಲಾಕ್ ಕಾಂಗ್ರೆಸ್ ಪದಾಧಿಕಾರಿಗಳಾದ ಶ್ರೀಕಾಂತ್ ಸಾಲ್ಯಾನ್, ರಾಜೇಶ್ ಪೂಜಾರಿ ಕುಳಾಯಿ, ಸಾಮಾಜಿಕ ಕಾರ್ಯಕರ್ತರಾದ ಮುಹಮ್ಮದ್ ಕಾನ, ನವಾಝ್ ಕುಳಾಯಿ, ಇಮ್ತಿಯಾಝ್, ಮುಸ್ತಫಾ ಅಂಗರಗುಂಡಿ ಮತ್ತಿತರರು ಹಾಜರಿದ್ದರು.