

ಮಂಗಳೂರು: ರಾಷ್ಟ್ರಭಕ್ತ ನಾಗರಿಕ ವೇದಿಕೆ ಸುರತ್ಕಲ್ ವತಿಯಿಂದ ಕಾರ್ಗಿಲ್ ವಿಜಯೋತ್ಸವ, ಹಣತೆ ಮೆರವಣಿಗೆ ಮತ್ತು ಅರ್ಹ ಸೈನಿಕ ಕುಟುಂಬಗಳಿಗೆ ಸೈನಿಕ ಕಲ್ಯಾಣ ನಿಧಿ ವಿತರಣೆ ಸುರತ್ಕಲ್ ಜಂಕ್ಷನ್‌ನ ಶೌರ್ಯ ಚಕ್ರ ಕ್ಯಾ.ಪ್ರಾಂಜಲ್ ವೇದಿಕೆಯಲ್ಲಿ ನಡೆಯಿತು.
ನಿವೃತ್ತ ಭೂ ಸೇನಾಧಿಕಾರಿ ಸೇನಾ ಮೆಡಲ್ ಪುರಸ್ಕೃತ ಕರ್ನಲ್ ರಾಜೇಶ್ ಹೊಳ್ಳ ಅವರು ಅಧ್ಯಕ್ಷತೆ, ವಹಿಸಿ ದೇಶ ಕಾಯುವ ಯೋಧರಿಗೆ , ಬಲಿದಾನಗೈದ ಹುತಾತ್ಮರಿಗೆ ರಾಷ್ಟ್ರಭಕ್ತ ವೇದಿಕೆ ಸುರತ್ಕಲ್ ವತಿಯಿಂದ ನಡೆಯುತ್ತಾ ಬರುತ್ತಿರುವ ಗೌರವಾಧಾರಗಳು ಕಂಡಾಗ ಹೆಮ್ಮೆಯೆನಿಸುತ್ತದೆ ಎಂದರು.
ಬಿಎಎಸ್‌ಎ್ನ ಸಂತೋಷ್ ಪೈ ಅವರು ಶುಭ ಹಾರೈಸಿದರು. ಸುರತ್ಕಲ್ ರಾಷ್ಟ್ರ ಭಕ್ತ ವೇದಿಕೆಯ ಅಧ್ಯಕ್ಷ ಸತ್ಯಜಿತ್ ಸುರತ್ಕಲ್ ವೇದಿಕೆಯ ಸೇವಾ ಕಾರ್ಯವನ್ನು ಪ್ರಾಸ್ತಾವಿಕವಾಗಿ ವಿವರಿಸಿದರು. ಇತ್ತೀಚೆಗೆ ಹುತಾತ್ಮರಾದ ಕ್ಯಾ.ಪ್ರಾಂಜಲ್ ಅವರ ಹೆಸರಿನಲ್ಲಿ ಸುರತ್ಕಲ್‌ನಲ್ಲಿ ಸರ್ಕಲ್ ನಿರ್ಮಾಣವಾಗಬೇಕಿದೆ. ಈ ಬಗ್ಗೆ ವೇದಿಕೆ ಶ್ರಮಿಸಲಿದೆ ಎಂದರು.
ಸೈನಿಕ ಕಲ್ಯಾಣ ನಿಧಿಗೆ ವೇದಿಕೆ ವತಿಯಿಂದ 5 ಲಕ್ಷ ರೂ. ಹಸ್ತಾಂತರಿಸಲಾಯಿತು. ನಿವೃತ್ತ ಯೋಧರಾದ ಕರ್ನಲ್ ರಾಜೇಶ್ ಹೊಳ್ಳ, ಸಿಪಿಒ ಪ್ರಭಾಕರ ರೈ, ಸಾರ್ಜೆಂಟ್ ಗುಂಡೇರ ಅವರನ್ನು ಗೌರವಿಸಲಾಯಿತು. ಗೌರವಾಧ್ಯಕ್ಷರಾದ ಮಹಾಬಲ ಪೂಜಾರಿ ಕಡಂಬೋಡಿ, ಸಾರ್ಜೆಂಟ್ ಸದಾಶಿವ ಮುಂಚೂರು ಮತ್ತಿತರರು ಉಪಸ್ಥಿತರಿದ್ದರು.
ಮಹೇಶ್ ಮೂರ್ತಿ ಸ್ವಾಗತಿಸಿದರು. ಉಪನ್ಯಾಸಕಿ ಗುಣವತಿ ರಮೇಶ್, ಶಶಿಕಲ ಶೆಟ್ಟಿ ನಿರೂಪಿಸಿದರು. ಬಹುಮಾನಿತರ ಪಟ್ಟಿಯನ್ನು ಯಶಪಾಲ್ ಸಾಲ್ಯಾನ್ ವಾಚಿಸಿದರು. ಅಣ್ಣಪ್ಪ ದೇವಾಡಿಗ ವಂದಿಸಿದರು. ಸುಮಾರು 20ಕ್ಕೂ ಮಿಕ್ಕಿ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಿ ಕ್ಯಾ.ಪ್ರಾಂಜಲ್ ಸರ್ಕಲ್ ಮಾಡುವ ಕುರಿತಂತೆ ಬೆಂಬಲ ವ್ಯಕ್ತ ಪಡಿಸಿ ಹಕ್ಕೊತ್ತಾಯ ಮಂಡಿಸಿದರು.
ವೇದಿಕೆಯ ವತಿಯಿಂದ ಯೋಧರ ಸ್ಮರಣಾರ್ಥವಾಗಿ ಇಡ್ಯಾ ಶ್ರೆ ಮಹಾಲಿಂಗೇಶ್ವರ ದೇವಸ್ಥಾನದಿಂದ ಆಯೋಜಿಸಲಾದ ಹಣತೆ ಮೆರವಣಿಗೆಯನ್ನು ವೇ.ವೇ.ಮೂ.ರಮಾನಂದ ಭಟ್ ಉದ್ಘಾಟಿಸಿ ಆಶೀರ್ವಚನ ನೀಡಿದರು. ಸುರತ್ಕಲ್ ಪೇಟೆಯಲ್ಲಿ ನಿರ್ಮಿಸಲಾದ ಯೋಧರ ಸ್ಮಾರಕಕ್ಕೆ ಶ್ರದ್ಧಾಂಜಲಿ ಅರ್ಪಿಸಲಾಯಿತು.