ಜೂನ್ 26ರಂದು ಸುರತ್ಕಲ್ ಠಾಣಾ ವ್ಯಾಪ್ತಿಯ ಚೊಕ್ಕಬೆಟ್ಟು ಅಜಾದ್ ನಗರದ 2ನೇ ಬ್ಲಾಕ್‌ನಲ್ಲಿ ಮೊದಲ ಕೃತ್ಯ ನಡೆದಿತ್ತು. ಅಲ್ಲಿನ ನಿವಾಸಿ ಜಾಹೀದಾ ಅವರು ತನ್ನ ಮನೆಯ ಬೆಡ್ ರೂಮ್‌ನಲ್ಲಿ ಮಲಗಿದ್ದಾಗ, ಅಪರಿಚಿತ ವ್ಯಕ್ತಿಯೊಬ್ಬ ಕಿಟಕಿ ಮುಖೇನ ಕೈ ಹಾಕಿ ಅವರ ಕುತ್ತಿಗೆಯಲ್ಲಿದ್ದ ಚಿನ್ನದ ಕರಿಮಣಿ ಸರವನ್ನು ಕಸಿದಿದ್ದನು. ಈ ವೇಳೆ ಕರಿಮಣಿ ಸರವು ತುಂಡಾಗಿದ್ದು, ಸುಮಾರು 20,000 ರೂ. ಮೌಲ್ಯದ ಸರದ ತುಂಡನ್ನು ಆರೋಪಿ ಹೊತ್ತೊಯ್ದಿದ್ದನು. ಉಳಿದ ಭಾಗ ಮಹಿಳೆಯ ಬಳಿಯೇ ಇತ್ತು.