ಪ್ರತಿಮಾ ಭಟ್ ಅವರಿಗೆ ಪಿಎಚ್.ಡಿ

mng--30 Aug PRATHIMA BHAT-PHD
Published on


ಮಂಗಳೂರು: ‘ಎಜುಕೇಶನ್ ಆ್ಯಂಡ್ ಎಂಪ್ಲೊಎಬಿಲಿಟಿ ಡಿವೈಡ್ ಇನ್ ಬಿಸಿನೆಸ್ ಎಜುಕೇಶನ್- ಎ ಸ್ಟಡಿ ಇನ್ ದಕ್ಷಿಣ ಕನ್ನಡ ಡಿಸ್ಟ್ರಿಕ್ಟ್ ಆಫ್ ಕರ್ನಾಟಕ’ ವಿಷಯದ ಕುರಿತಾಗಿ ಕೃಷ್ಣಾಪುರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವ್ಯವಹಾರ ಅಧ್ಯಯನ ಉಪನ್ಯಾಸಕಿ ಪ್ರತಿಮಾ ಭಟ್ ಬಿ ಅವರು ಮಂಡಿಸಿದ ಸಂಶೋಧನಾ ಮಹಾ ಪ್ರಬಂಧಕ್ಕೆ ಮಂಗಳೂರು ವಿಶ್ವವಿದ್ಯಾಲಯವು ಪಿಎಚ್.ಡಿ ಪದವಿ ನೀಡಿ ಗೌರವಿಸಿದೆ.


ಇವರು ಮಂಗಳೂರು ವಿಶ್ವವಿದ್ಯಾಲಯ ಕಾಲೇಜಿನ ಪ್ರಾಧ್ಯಾಪಕರಾದ ಡಾ.ಸುಭಾಷಿಣಿ ಶ್ರೀವತ್ಸ ಅವರ ಮಾರ್ಗದರ್ಶನದಲ್ಲಿ ಈ ಪ್ರಬಂಧವನ್ನು ಸಿದ್ಧ ಪಡಿಸಿದ್ದರು. ಪ್ರತಿಮಾ ಭಟ್ ಅವರು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ನಿಯತಕಾಲಿಕೆಗಳಲ್ಲಿ ಹಲವು ಲೇಖನಗಳನ್ನು ಪ್ರಕಟಿಸಿದ್ದರು. ಇವರು ದಿ.ಬಂಟ್ವಾಳ ನಾಗೇಶ್ ಭಟ್ ಮತ್ತು ಲಲಿತಾ ಭಟ್ ದಂಪತಿ ಪುತ್ರಿ ಮತ್ತು ಸುರತ್ಕಲ್ ಗೋವಿಂದದಾಸ ಕಾಲೇಜಿನ ಉಪನ್ಯಾಸಕ ಡಾ.ಗಣೇಶ್ ಆಚಾರ್ಯ ಬಿ. ಅವರ ಪತ್ನಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net