ಸುರತ್ಕಲ್ ಹೊಟೇಲ್ ಸಿಬ್ಬಂದಿ ಆತ್ಮಹತ್ಯೆ

sucide
Published on

ಮಂಗಳೂರು: ಸುರತ್ಕಲ್‌ನ ಹೊಟೇಲೊಂದರ ಸಿಬ್ಬಂದಿ ರೂಮ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವುದು ಬುಧವಾರ ಮಧ್ಯಾಹ್ನ ನಡೆದಿದೆ.


ಕುಮಟಾ ನಿವಾಸಿ ಮಣಿಕಂಠ ಎಂದು ಗುರುತಿಸಲಾಗಿದೆ. ಈತ ಒಂದು ತಿಂಗಳ ಹಿಂದೆಯಷ್ಟೇ ಸುರತ್ಕಲ್ ಜಂಕ್ಷನ್‌ನಲ್ಲಿರುವ ಹೊಟೇಲ್‌ಗೆ ರೂಮ್ ಬಾಯ್ ಆಗಿ ಕೆಲಸಕ್ಕೆ ಸೇರಿದ್ದ. ಬೆಳಗ್ಗಿನಿಂದ ಎಂದಿನಂತೆ ಇತರ ಸಿಬ್ಬಂದಿ ಜತೆ ಕೆಲಸ ಮಾಡಿಕೊಂಡಿದ್ದ. ಮಧ್ಯಾಹ್ನ ಈತ ಕಾಣಿಸದೆ ಇದ್ದಾಗ ಹುಟುಕಾಟ ಆರಂಭಿಸಿದ್ದಾರೆ. ರೂಮ್ ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net