

ಮಂಗಳೂರು: ಹಿಂದು ವಿದ್ಯಾದಾಯಿನೀ ಸಂಘದ ಆಡಳಿತಕ್ಕೊಳಪಟ್ಟ ಸುರತ್ಕಲ್‌ನ ಅನುದಾನಿತ ವಿದ್ಯಾದಾಯಿನೀ ಪೌಢ ಶಾಲೆಯ 1984-85 ನೇ ಎಸ್.ಎಸ್.ಎಲ್.ಸಿ ಬ್ಯಾಚಿನ ಹತ್ತನೇ ‘ಎ’ ತರಗತಿಯ ವಿದ್ಯಾರ್ಥಿಗಳ ತಂಡ ಕಲಿತ ಶಾಲೆಗೆ ಕೊಡುಗೆ ಸಮರ್ಪಿಸಿತು.
ಹಳೇ ವಿದ್ಯಾರ್ಥಿಗಳಾದ ಪ್ರಕಾಶ್ ರಾವ್, ರಾಮಣ್ಣ, ಸತೀಶ್, ಮನೋಹರ್, ಶೋಧನ್, ರಾಘವೇಂದ್ರ ರಾವ್, ಶ್ರೀನಿಧಿ, ಭಾರತಿ ಇವರ ತಂಡವು ಶಾಲೆಗೆ ಭೇಟಿ ನೀಡಿ ದೇಣಿಗೆಯಾಗಿ ನೀಡಿದ 1.25 ಲಕ್ಷ ರೂ. ಮೌಲ್ಯದ 6 ಸಿರಾಮಿಕ್ ತರಗತಿ ಬೋರ್ಡ್‌ಗಳ ಸಮರ್ಪಣಾ ಸಮಾರಂಭವು ಅಂದು ಕಲಿತ ತರಗತಿ ಕೊಠಡಿಯಲ್ಲಿ ನಡೆಯಿತು.
ಶಾಲಾ ಸಂಚಾಲಕ ಸುಧಾಕರ್ ರಾವ್ ಪೇಜಾವರ, ಶಾಲಾ ಮುಖ್ಯ ಶಿಕ್ಷಕ ಬಾಲಚಂದ್ರ ಕೆ., ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷೆ ಸುಜಯ ಮತ್ತು ಶಿಕ್ಷಕ ಶಿಕ್ಷಕೇತರ ಸಿಬ್ಬಂದಿ ಉಪಸ್ಥಿತರಿದ್ದರು. ಮುಂದಿನ ದಿನಗಳಲ್ಲಿ ಕಲಿತ ಶಾಲೆಯನ್ನು ಮರೆಯದೆ ಸಮಾಜದಲ್ಲಿ ಉನ್ನತ ಸ್ಥಾನಮಾನವನ್ನು ಹೊಂದಿದಾಗ ತಮ್ಮಿಂದಾಗುವ ಸಹಾಯವನ್ನು ನೀಡಬೇಕೆಂದು ಮಕ್ಕಳಿಗೆ ಸ್ಪೂರ್ತಿದಾಯಕ ಮಾತುಗಳನ್ನಾಡಿದರು.