ಡೆತ್ ನೋಟ್ ಪತ್ತೆ: 17 ವರ್ಷದ ಬಾಲಕಿ ಕಾಲೇಜಿನಿಂದ ಬಂದು ಡೆತ್ ನೋಟ್ ಬರೆದಿಟ್ಟು ನೇಣಿಗೆ ಶರಣಾಗಿದ್ದಾಳೆ. ಡೆತ್ ನೋಟ್‌ನಲ್ಲಿ ‘ನಾನು ತಪ್ಪು ಮಾಡಿದ್ದೇನೆ ಅಮ್ಮಾ, ನನ್ನ ತಪ್ಪನ್ನು ಮನ್ನಿಸಿ. ಇನ್ನು ಬದುಕಲು ಸಾಧ್ಯವಿಲ್ಲ. ನನಗೆ ಹಿಂದು ಸಂಘಟನೆಯವರು ಸಹಾಯ ಮಾಡಿಲ್ಲ. ನನಗೆ ಮೋಸ ಮಾಡಿ ಅವನು ಆರಾಮವಾಗಿದ್ದಾನೆ. ನಾನು ನಂಬಿದವರು ನನಗೆ ಕೈ ಕೊಟ್ಟಿದ್ದಾರೆ. ಸಂಘಟನೆಯಲ್ಲಿದ್ದೂ ನನಗೆ ಸಹಾಯ ಸಿಗಲಿಲ್ಲ. ನನ್ನ ರೀತಿ ಯಾರದ್ದೂ ಜೀವನ ಹಾಳಾಗಬಾರದು. ನನ್ನೊಂದಿಗೆ ದೈವ, ದೇವರು ಯಾರೂ ಇಲ್ಲ ಅಮ್ಮಾ ಸಾರಿ ಅಮ್ಮಾ ಎಂದು ಹೇಳಿ ತುಳುವಿನಲ್ಲಿ ಬರೆದಿದ್ದಾಳೆ.