

ಮಂಗಳೂರು: ಮತದಾರರಿಗೆ ಪಕ್ಷಗಳು ನೀಡುವ ಗ್ಯಾರಂಟಿಗಿಂತ ದೇಶ, ರಾಷ್ಟ್ರೀಯತೆ ಮುಖ್ಯ ಎಂಬುದು ದೇಶದ ಪ್ರಮುಖ ರಾಜ್ಯಗಳಲ್ಲಿ ನಡೆದ ಚುನಾವಣಾ ಫಲಿತಾಂಶದಿಂದ ವೇದ್ಯವಾಗುತ್ತದೆ. ಫಲಿತಾಂಶದಿಂದ ಕಾಂಗ್ರೆಸ್ ಸಂಪೂರ್ಣ ವಿಚಲಿತವಾಗಿದೆ ಎಂದು ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಡಾ.ಭರತ್ ಶೆಟ್ಟಿ ಹೇಳಿದರು.
ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್‌ಗಢದಲ್ಲಿ ಬಿಜೆಪಿ ಜಯಭೇರಿ ಬಾರಿಸಿರುವ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಕರ್ತರು ಸುರತ್ಕಲ್‌ನಲ್ಲಿ ಆಯೋಜಿಸಿದ ವಿಜಯೋತ್ಸವದಲ್ಲಿ ಮಾತನಾಡಿದರು.
ಗ್ಯಾರಂಟಿಗಳಿಗೆ ಆದ್ಯತೆ ನೀಡದ ಮಹಿಳಾ ಮತದಾರರು ಬಿಜೆಪಿ ಬೆಂಬಲಿಸಿ ಅಧಿಕಾರ ಹಿಡಿಯಲು ನೆರವಾಗಿದ್ದಾರೆ. ತೆಲಂಗಾಣದಲ್ಲಿ ಬಿಜೆಪಿಯ 8ಕ್ಕೂ ಅಧಿಕ ಶಾಸಕರು ವಿಧಾನಸಭೆ ಪ್ರವೇಶಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಪಕ್ಷದ ಇತರ ದಕ್ಷ ನಾಯಕರ ಅವಿರತ ಶ್ರಮದಿಂದ ಬಿಜೆಪಿ ರಾಜ್ಯಭಾರ ಹೆಚ್ಚಾಗುತ್ತಿದೆ. ಮುಂದಿನ ಲೋಕಸಭಾ ಚುನಾವಣೆಯಲ್ಲೂ ಬಿಜೆಪಿ ಭರ್ಜರಿ ಫಲಿತಾಂಶ ನಿರೀಕ್ಷಿಸುತ್ತಿದೆ ಎಂದರು.
ಮಂಡಲದ ಅಧ್ಯಕ್ಷ ತಿಲಕ್‌ರಾಜ್ ಕೃಷ್ಣಾಪುರ, ಶಕ್ತಿ ಕೇಂದ್ರದ ಪ್ರಮುಖ ವಿಠಲ ಸಾಲ್ಯಾನ್ ಮಾತನಾಡಿದರು. ಪಕ್ಷದ ಪ್ರಮುಖರಾದ ಗಣೇಶ್ ಹೊಸಬೆಟ್ಟು, ಅಶೋಕ್ ಶೆಟ್ಟಿ ತಡಂಬೈಲು, ಸುನಿಲ್ ಕುಳಾಯಿ, ಜಯಂತ್ ಸಾಲ್ಯಾನ್, ರಾಜೇಶ್ ಮುಕ್ಕ, ರಣದೀಪ್ ಕಾಂಚನ್, ಸಂದೀಪ್ ಪಚ್ಚನಾಡಿ, ಸಿತೇಶ್ ಕೊಂಡೆ, ಯುವ ಮೋರ್ಚಾದ ಅಧ್ಯಕ್ಷ ಭರತ್‌ರಾಜ್ ಕೃಷ್ಣಾಪುರ, ತಿಲಕ್, ಜಯಾನಂದ ಚೇಳ್ಯಾರು, ಸುರೇಶ್, ಓಂ ಪ್ರಕಾಶ್ ಶೆಟ್ಟಿಗಾರ, ಮನಪಾ ಕಾರ್ಪೊರೇಟರ್‌ಗಳಾದ ಶ್ವೇತಾ ಪೂಜಾರಿ, ಸರಿತಾ ಎಸ್., ಶೋಭಾ ಆರ್., ಲೋಕೇಶ್ ಬೊಳ್ಳಾಜೆ, ಲೋಹಿತ್ ಅಮೀನ್, ಶರತ್ ಕುಮಾರ್, ಸುಮಂಗಲಾ ರಾವ್, ಗಾಯತ್ರಿ ರಾವ್, ಸಂಗೀತಾ ಆರ್. ನಾಯಕ್, ಪಕ್ಷ ಕಾರ್ಯಕರ್ತರು ಹಾಗೂ ಇತರರು ಪಾಲ್ಗೊಂಡಿದ್ದರು.