

ಸುರಪುರ: ವಿದ್ಯಾರ್ಧಿಗಳು ನಿಮ್ಮ ಓದಿಗಾಗಿ ಸಾಕಷ್ಟು ಸೌಲಭ್ಯಗಳನ್ನು ಸಕರ್ಾರ ಮತ್ತು ಪೋಷಕರು ಒದಗಿಸುತ್ತಿದ್ದು, ಇದರ ಸದುಪಯೋಗ ಪಡೆಸಿಕೊಂಡು ಉತ್ತಮ ಅಭ್ಯಾಸ ಮಾಡಬೇಕು ಎಂದು ಶಾಸಕ ನರಸಿಂಹನಾಯಕ ಹೇಳಿದರು.
ನಗರದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಸಭಾಗಂಣದಲ್ಲಿ ವಿದ್ಯಾರ್ಥಿಗಳಿಗೆ ಲ್ಯಾಪಟಾಪ್ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಿಮಗೆ ಲ್ಯಾಪ್ಟಾಪ್ ವಿತರಿಸುವುದು ನಿಮ್ಮ ಅಭ್ಯಾಸಕ್ಕೆ ಸಹಾಯವಾಗಲೆಂದು ಇದನ್ನು ಸರಿಯಾದ ರೀತಿಯಲ್ಲಿ ಬಳಸಿಕೊಂಡು ಅಬ್ಯಾಸ ಮಾಡಬೇಕು ಮತ್ತು ಇದರಿಂದ ವಿದ್ಯಾರ್ಥಿ ಗಳು ವಾಮಮಾರ್ಗ ಹಿಡಿದು ದಾರಿ ತಪ್ಪುವುದು ಬೇಡ ಎಂದರು.
ಪ್ರಾಚಾರ್ಯ ವೆಂಕೋಬ ಬಿರಾದಾರ ಮಾತನಾಡಿ, ವಿದ್ಯಾರ್ಥಿಗಳು ನಿಮಗೆ ಸಿಗುವ ಸವಲತ್ತುಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಮುಖ್ಯಮಂತ್ರಿಗಳ ಉಚಿತ ಲ್ಯಾಪಟಾಪ್ ವಿತರಣೆ ಯೋಜನೆಯನ್ನು ಈ ಬಾರಿ ಎಲ್ಲ ವರ್ಗದ ವಿದ್ಯಾಥರ್ಿಗಳಿಗೆ ವಿಸ್ತರಿಸಲಾಗಿದೆ. ಒಟ್ಟು ನಮ್ಮ ಕಾಲೇಜಿಗೆ 210 ಲ್ಯಾಪ್ಟಾಪ್ಗಳು ವಿತರಣೆಗೆ ಸಿದ್ದವಾಗಿವೆ ಎಂದರು.
ಮುಖಂಡರಾದ ಸುರೇಶ ಸಜ್ಜನ್, ಹೆಚ್.ಸಿ.ಪಾಟೀಲ್, ಉಪನ್ಯಾಸಕರಾದ ಭೀಮಣ್ಣ ಮಾಲಿಪಾಟಿಲ್, ಎಸ್.ಎಸ್ ರಾಮಪುರೆ, ಬಲಭೀಮ ದೇಸಾಯಿ ಸೇರಿದಂತೆ ವಿದ್ಯಾಥರ್ಿಗಳು ಹಾಗೂ ಇನ್ನಿತರರಿದ್ದರು