ಚನ್ನಮಲ್ಲಿಕಾರ್ಜುನ ಸ್ವಾಮಿ ಭವ್ಯ ರಥೋತ್ಸವ

17 nmt
Published on

ನ್ಯಾಮತಿ: ತಾಲೂಕಿನ ಸುರಹೊನ್ನೆ ಗ್ರಾಮದಲ್ಲಿ ಪ್ರತಿ ಮೂರು ವರ್ಷಕ್ಕೊಮ್ಮೆ ನಡೆಯುವ ಶ್ರೀ ಚನ್ನಮಲ್ಲಿಕಾರ್ಜುನ ಸ್ವಾಮಿ ರಥೋತ್ಸವ ಬುಧವಾರ ಭಕ್ತಗಣದ ಸಮ್ಮುಖದಲ್ಲಿ ಸಂಭ್ರಮದಿಂದ ಜರುಗಿತು.

ಬೃಹತ್ ಹೂಮಾಲೆ, ಬಾಳೆಗೊನೆ, ನಿಂಬೆಹಣ್ಣಿನ ಹಾರ, ತಳಿರು ತೋರಣಗಳಿಂದ ರಥವನ್ನು ಅಲಂಕರಿಸಲಾಗಿತ್ತು. ಅಲಂಕೃತ ರಥಕ್ಕೆ ಅರ್ಚಕರು, ಸೇವಾಕರ್ತರು, ಮುತ್ತೈದೆಯರು ಧಾರ್ವಿುಕ ಪೂಜಾ ಕಾರ್ಯ ನೆರವೇರಿಸಿದರು. ಜತೆಗೆ ತೇರು ಗಾಲಿಗೆ ಎಡೆಬಾನ ಸೇವೆ ಸಲ್ಲಿಸಿದರು.

ಸ್ವಾಮಿಯ ಉತ್ಸವ ಮೂರ್ತಿಯನ್ನು ಮೆರವಣಿಗೆ ಮೂಲಕ ಕರೆ ತಂದು ರಥದಲ್ಲಿ ಪ್ರತಿಷ್ಠಾಪಿಸಲಾಯಿತು. ನಂತರ ಭಕ್ತರು ಹರ ಹರ ಮಹಾದೇವ, ಶ್ರೀ ಮಲ್ಲಿಕಾರ್ಜುನ ಸ್ವಾಮಿಗೆ ಜೈ ಎನ್ನುವ ಜಯಘೊಷ ಮೊಳಗಿಸಿದರು.

ಬಳಿಕ ರಥವನ್ನು ಎಸ್​ಟಿ ರಸ್ತೆಯಿಂದ ಸವಳಂಗ ರಸ್ತೆಯವರೆಗೆ ಎಳೆಯಲಾಯಿತು. ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದರು. ರಥಕ್ಕೆ ಮಂಡಕ್ಕಿ, ಕಾಳು ಮೆಣಸು, ಬಾಳೆಹಣ್ಣು ತೂರಿ ಹರಕೆ ತೀರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net