

ಹೊನ್ನಾಳಿ: ನ್ಯಾಮತಿ ತಾಲೂಕಿನ ಸೂರಗೊಂಡನಕೊಪ್ಪದಲ್ಲಿ ಶನಿವಾರ ಹೋಮಕುಂಡಕ್ಕೆ ಪೂಜೆ ಸಲ್ಲಿಸಿ, ಪೂರ್ಣಾಹುತಿ ಅರ್ಪಿಸುವುದರೊಂದಿಗೆ ಮೂರು ದಿನಗಳ ಸಂತ ಸೇವಾಲಾಲ್ ಜಯಂತ್ಯುತ್ಸವಕ್ಕೆ ತೆರೆಬಿದ್ದಿದೆ.
ಹೋಮಕುಂಡದ ಆವರಣಕ್ಕೆ ಅಲಂಕೃತ ಪಲ್ಲಕ್ಕಿಯಲ್ಲಿ ಮರಿಯಮ್ಮ ಮತ್ತು ಸೇವಾಲಾಲ್ ಉತ್ಸವ ಮೂರ್ತಿಗಳನ್ನು ತರಲಾಯಿತು. ವಿವಿಧ ಬಣ್ಣದ ರಂಗೋಲಿ, ಹೂವಿನಿಂದ ಅಲಂಕರಿಸಿದ್ದ ಹೋಮಕುಂಡಕ್ಕೆ ಒಂಬತ್ತು ವಿವಿಧ ಜಾತಿಯ ಮರದ ಚೆಕ್ಕೆಗಳು, ತುಪ್ಪ ತುಂಬಿದ ಇರುಮುಡಿ ಕಾಯಿಗಳನ್ನು ಧಾರ್ವಿುಕ ವಿಧಾನಗಳೊಂದಿಗೆ ಜೋಡಿಸಿ, ಕರ್ಪರದ ಮೂಲಕ ಕುಂಡವನ್ನು ಬೆಳಗಿಸಿ, ಗೋಧಿ ಪಾಯಸ ಮತ್ತು ತುಪ್ಪವನ್ನು ನೈವೇದ್ಯವಾಗಿ ಅರ್ಪಿಸಲಾಯಿತು.
ಹೋಮ ಕುಂಡದ ಧಾರ್ವಿುಕ ವಿಧಿ-ವಿಧಾನಗಳನ್ನು ಸೇವಾಲಾಲ್ ದೇವಸ್ಥಾನದ ಅರ್ಚಕ ಸೇವ್ಯಾನಾಯ್ಕ, ಮರಿಯಮ್ಮ ದೇವಸ್ಥಾನದ ಆರ್ಚಕ ಮಂಜುನಾಥ್ನಾಯ್ಕ ಮತ್ತು ವಿವಿಧ ಸಾಧು ಸಂತರು ನೆರವೇರಿಸಿದರು. ಮೂರನೇ ದಿನವೂ ಧಾರ್ವಿುಕಾ ಕಾರ್ಯಕ್ರಮದಲ್ಲಿ ಭಕ್ತರಿಗೆ ಊಟೋಪಚಾರದ ವ್ಯವಸ್ಥೆ ಮಾಡಲಾಗಿತ್ತು.
ವಿಧಾನಸಭೆ ಉಪ ಸಭಾಪತಿ ರುದ್ರಪ್ಪ ಮಾನಪ್ಪ ಲಮಾಣಿ, ಮಹಾಮಠ ನಿರ್ವಾಹಣಾ ಸಮಿತಿ ಅಧ್ಯಕ್ಷ ಹನುಮಂತನಾಯ್ಕ, ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಎನ್. ಜಯದೇವನಾಯ್ಕ, ವ್ಯವಸ್ಥಾಪಕ ನಿರ್ದೇಶಕ ಎನ್. ರಾಜು, ಉಪವಿಭಾಗಾಧಿಕಾರಿ ವಿ. ಅಭಿಷೇಕ್, ಡಿವೈಎಸ್ಪಿ ಸ್ಯಾಮ್ ವರ್ಗಿಸ್, ಮಹಾಮಠ ಸಮಿತಿ ಪ್ರಧಾನ ಕಾರ್ಯದರ್ಶಿ ಎನ್. ಅರುಣಕುಮಾರ, ಹರಪನಹಳ್ಳಿ ಹೀರಾಲಾಲ್, ಶಿವರಾಮ್ಾಯ್ಕ, ಸುರೇಂದ್ರನಾಯ್ಕ, ಮಾರುತಿನಾಯ್ಕ, ಮಲ್ಲಿಕಾರ್ಜುನ್, ಗೋಪಾಲನಾಯ್ಕ, ಭೋಜ್ಯನಾಯ್ಕ, ಪ್ರತಿಷ್ಠಾನ ಯೋಜನಾ ನಿರ್ದೇಶಕ ಜೆ. ಹರೀಶ್, ಮಹಾಮಠ ಸಮಿತಿ ವ್ಯವಸ್ಥಾಪಕ ಸೇವ್ಯಾನಾಯ್ಕ, ನ್ಯಾಮತಿ ಪಿಐ ಎನ್.ಎಸ್. ರವಿ ವಿವಿಧ ಇಲಾಖೆಗಳ ಮುಖ್ಯಸ್ಥರು ಇದ್ದರು.