

ಕೋಲಾರ; ಕೊತ್ತೂರು ಜಿ.ಮಂಜುನಾಥ್ ಜಾತಿ ಪ್ರಮಾಣ ಪತ್ರ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಆದೇಶಕ್ಕೆ ಸುಪ್ರೀಂಕೋಟ್ ತಡೆಯಾೆ ನೀಡಿದೆ.
ಮುಳಬಾಗಲು ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಕ್ರಿಮಿನಲ್ ಪ್ರಕರಣ ತನಿಖೆ ನಡೆಸುವಂತೆ ಕಳೆದ ವರ್ಷ ಹೈಕೋರ್ಟ್ ನ್ಯಾಯಮೂರ್ತಿ ನಾಗಪ್ರಸನ್ನ ಅವರಿದ್ದ ಪೀಠ ಆದೇಶಿಸಿತ್ತು. ಈ ಸಂಬಂಧ ಕೊತ್ತೂರು ಮಂಜುನಾಥ್ ಸುಪ್ರಿಂ ಕೋರ್ಟ್ನಲ್ಲಿ ವಿಶೇಷ ಮೇಲ್ಮನವಿ ಸಲ್ಲಿಸಿದ್ದರು. ನ್ಯಾಯಮೂರ್ತಿಗಳಾದ ಬಿ.ಆರ್.ಗವಾಯಿ ಹಾಗೂ ಅಗಸ್ಟಿನ್ ಮಸೈ ಅವರಿದ್ದ ಪೀಠ ಹೈಕೋರ್ಟ್ ಆದೇಶಕ್ಕೆ ತಡೆಯಾೆ ನೀಡಿದೆ.
ಏನಿದು ಪ್ರಕರಣ..?
ಕಳೆದ 2013ರಲ್ಲಿ ಕೊತ್ತೂರು ಮಂಜುನಾಥ್ ಮುಳಬಾಗಿಲು ಮೀಸಲು ವಿಧಾನಸಭಾ ೇತ್ರದಿಂದ ಬುಡ್ಗ ಜಂಗಮ ಜಾತಿ ಪ್ರಮಾಣ ಪತ್ರ ನೀಡಿ ಚುನಾವಣೆಗೆ ಸ್ಪರ್ಧಿಸಿ ಶಾಸಕರಾಗಿ ಆಯ್ಕೆಯಾಗಿದ್ದರು ಎನ್ನಲಾಗಿತ್ತು. ಕೊತ್ತೂರು ಮಂಜುನಾಥ್ ಬಡ್ಗ ಜಂಗಮ ಜಾತಿಯವರಲ್ಲ ಎಂದು ಪರಾಜಿತ ಅಭ್ಯರ್ಥಿಗಳಾದ ಮುನಿಆಂಜಿನಪ್ಪ ಹಾಗೂ ಇತರರು ಹೈಕೋರ್ಟ್ನಲ್ಲಿ ತಕರಾರು ಅರ್ಜಿ ಸಲ್ಲಿಸಿದ್ದರು.