

ವಿಟ್ಲ: ಗುರಿ ಸಾಽಸುವುದಕ್ಕೆ ಪ್ರತಿಯೊಬ್ಬರ ಶ್ರಮ ಅಗತ್ಯವಾಗಿದ್ದು, ೨೦೧೨ರಿಂದ ೩ ಸಾವಿರಕ್ಕೂ ಅಽಕ ವಿದ್ಯಾರ್ಥಿಗಳಿಗೆ ೫ ಕೋಟಿ ರೂಪಾಯಿಯಷ್ಟು ಸಹಾಯ ನೀಡಲಾಗಿದೆ. ವಿದ್ಯಾರ್ಥಿಗಳ ಜೀವನದ ಗುರಿಯನ್ನು ತಲುಪಲು -ಂಡೇಷನ್ ಮೂಲಕ ಸಹಕಾರ ನೀಡಲಾಗುತ್ತಿದೆ. ಶಿಕ್ಷಣದ ಜತೆಗೆ ಇತರ ಚಟುವಟಿಕೆಯಲ್ಲಿ ಭಾಗವಹಿಸುವುದರಿಂದ ಸಾಧನೆ ಮಾಡಲು ಸಾಧ್ಯ ಎಂದು ಸುಪ್ರಜಿತ್ ಫೌಂಡೇಷನ್ ಅಧ್ಯಕ್ಷ ಅಜಿತ್ ಕುಮಾರ್ ರೈ ಹೇಳಿದರು.
ವಿಟ್ಠಲ ಪದವಿ ಪೂರ್ವ ಕಾಲೇಜಿನ ಸುವರ್ಣ ರಂಗ ಮಂದಿರದಲ್ಲಿ ಸುಪ್ರಜಿತ್ ಫೌಂಡೇಷನ್ ಬೆಂಗಳೂರು ವತಿಯಿಂದ ಬಂಟ್ವಾಳ ತಾಲೂಕಿನ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ೭೦೩ ವಿದ್ಯಾರ್ಥಿಗಳಿಗೆ ಸುಮಾರು ೫೦ ಲಕ್ಷ ರೂ. ವಿದ್ಯಾರ್ಥಿ ವೇತನ ವಿತರಿಸಲಾಯಿತು. ವಿದ್ಯಾರ್ಥಿಗಳ ಅರ್ಜಿಯನ್ನು ಪರಿಶೀಲಿಸಿದವರನ್ನು ಗೌರವಿಸಲಾಯಿತು.
ಬೆಂಗಳೂರು ಸುಪ್ರಜಿತ್ ಇಂಜಿನಿಯರಿಂಗ್ ಜನರಲ್ ಮ್ಯಾನೇಜರ್ ಭಾರ್ಗವಿ ಐತಾಳ್, ವಿಟ್ಠಲ ಎಜುಕೇಶನ್ ಸೊಸೈಟಿ ಅಧ್ಯಕ್ಷ ಮುಗುಳಿ ತಿರುಮಲೇಶ್ವರ ಭಟ್, ನಿವೃತ್ತ ಪ್ರಾಂಶುಪಾಲ ಅನಂತಕೃಷ್ಣ ಹೆಬ್ಬಾರ್, ಸುಪ್ರಜಿತ್ ಐಟಿಐ ಸಂಚಾಲಕ ಅಲಾನ್ಸ್ ಸಿಲ್ವೆಸ್ಟರ್ ಮಸ್ಕರೇನಸ್, ವಿಟ್ಠಲ ಎಜುಕೇಶನ್ ಸೊಸೈಟಿ ಕಾರ್ಯದರ್ಶಿ ರಾಧಾಕೃಷ್ಣ ನಾಯಕ್, ಸದಸ್ಯ ನಿತ್ಯಾನಂದ ನಾಯಕ್, ಪ್ರಾಂಶುಪಾಲ ಆದರ್ಶ ಚೊಕ್ಕಾಡಿ, ಐಟಿಐ ಆಡಳಿತ ಮಂಡಳಿ ಕಾರ್ಯದರ್ಶಿ ಶ್ರೀಪ್ರಕಾಶ್, ಕೋಶಾಽಕಾರಿ ಸಂತೋಷ್ ಕುಮಾರ್ ಶೆಟ್ಟಿ ಪೆಲ್ತಡ್ಕ, ನಾರಾಯಣ ನಾಯಕ್ ಉಪಸ್ಥಿತರಿದ್ದರು.
ವಿಟ್ಠಲ ಪ್ರೌಢಶಾಲಾ ಮುಖ್ಯ ಶಿಕ್ಷಕ ಕಿರಣ್ ಕುಮಾರ್ ಬ್ರಹ್ಮಾವರ ಸ್ವಾಗತಿಸಿದರು. ವಿದ್ಯಾರ್ಥಿವೇತನ ಸಮಿತಿ ಅಧ್ಯಕ್ಷ ಸುಬ್ರಾಯ ಪೈ ಪ್ರಸ್ತಾವನೆಗೈದರು. ಐಟಿಐ ಪ್ರಾಂಶುಪಾಲ ರಮೇಶ್ ರೈ ವಂದಿಸಿದರು. ವಿಟ್ಠಲ ಜೇಸೀಸ್ ಆಂಗ್ಲ ಮಾಧ್ಯಮ ಶಾಲೆ ಆಡಳಿತ ಅಽಕಾರಿ ರಾಧಾಕೃಷ್ಣ ಎರುಂಬು ನಿರೂಪಿಸಿದರು. ವಿಟ್ಠಲ ಎಜುಕೇಶನ್ ಸೊಸೈಟಿ ಆಡಳಿತ ಅಽಕಾರಿ ಪ್ರಶಾಂತ್ ಚೊಕ್ಕಾಡಿ, ಲೋಕಾನಂದ, ಕುಮಾರ ಸುಬ್ರಹ್ಮಣ್ಯ ಶಾಸ್ತ್ರಿ, ಶ್ರೀನಿವಾಸ ಗೌಡ, ಚಂದ್ರಕಾಂತ ಸಹಕರಿಸಿದರು.