

ಹಿರಿಯೂರು: ಜಾತ್ಯತೀತ ತತ್ವ, ಸಾಮಾಜಿಕ ನ್ಯಾಯದ ತಳಹದಿ ಮೇಲೆ ಎಲ್ಲರನ್ನು ಒಟ್ಟಿಗೆ ಕರೆದೊಯ್ಯುವ ಕಾಂಗ್ರೆಸ್ ತತ್ವ, ಸಿದ್ಧಾಂತಕ್ಕೆ ಬದ್ಧಳಾಗಿ ಪಕ್ಷ ಸೇರ್ಪಡೆಗೆ ನಿರ್ಧಾರ ಮಾಡಿದ್ದೇನೆ ಎಂದು ಮಾಜಿ ಶಾಸಕಿ ಕೆ.ಪೂರ್ಣಿಮಾ ಹೇಳಿದರು.
ನಗರದ ಹುಳಿಯಾರು ರಸ್ತೆಯ ತಮ್ಮ ನಿವಾಸದಲ್ಲಿ ಮಂಗಳವಾರ ಆಯೋಜಿಸಿದ್ದ ಬೆಂಬಲಿಗರ ಸಭೆಯಲ್ಲಿ ಮಾತನಾಡಿ, ಪಕ್ಷ ಸೇರ್ಪಡೆ ಉತ್ತಮ ನಿರ್ಧಾರವಾಗಿದ್ದು, ಬೆಂಬಲಿಗರು, ಅಭಿಮಾನಿಗಳನ್ನು ಯಾವುದೇ ಕಾರಣಕ್ಕೂ ಕೈಬಿಡುವುದಿಲ್ಲ. ಅವರ ಹಿತರಕ್ಷಣೆಗೆ ಬದ್ಧಳಾಗಿರುವೆ ಎಂದು ಅಭಯ ನೀಡಿದರು.
ನಗರಸಭೆ ಸದಸ್ಯ ಕದ್ರು ಗಣೇಶ್, ಎಪಿಎಂಸಿ ಮಾಜಿ ಅಧ್ಯಕ್ಷ ಉಗ್ರಪ್ಪ, ರೈತ ಮುಖಂಡ ಆರನಕಟ್ಟೆ ಶಿವಕುಮಾರ್, ರಾಜ್ಯ ಗೊಲ್ಲ ಸಂಘದ ಅಧ್ಯಕ್ಷ ಡಿ.ಟಿ.ಶ್ರೀನಿವಾಸ್, ತಾಲೂಕಾಧ್ಯಕ್ಷ ರಂಗಸ್ವಾಮಿ, ಮುಖಂಡರಾದ ಸಣ್ಣಪ್ಪ, ಜಯವಾಣಿ ಸರವಣ, ಮಂಜುಳಾ, ಅಪೂರ್ವಾ ಚಿರಂಜೀವಿ, ಸಿದ್ದರಾಮಣ್ಣ, ಶ್ರವಣಗೆರೆ ಶಿವಣ್ಣ, ಬಬ್ಬೂರು ಸುರೇಶ್, ರಾಮಕೃಷ್ಣ, ಜಯಶೀಲಾ ನಾಯ್ಕ, ತಂಗವೇಲು, ವಿನಯ್, ಗೋವಿಂದರಾಜ್, ವಿ.ಕೆ.ಗುಡ್ಡ ನಾಗರಾಜ್ ಇತರರಿದ್ದರು.