ಕೇಂದ್ರ ಏನೇ ಕ್ರಮ ಜರುಗಿಸಿದರೂ ಬೆಂಬಲ

santosh laad
Published on

ಹುಬ್ಬಳ್ಳಿ: ಪಾಕಿಸ್ತಾನದ ಮೇಲೆ ಯುದ್ಧ ಮಾಡುವುದೊಂದೇ ಪರಿಹಾರವಲ್ಲ ಎಂಬುದು ಸಿಎಂ ಅವರ ವಯಕ್ತಿಕ ಹೇಳಿಕೆ. ಆದರೆ, ಪಾಕಿಸ್ತಾನ ವಿರುದ್ಧ ಏನೇ ಕ್ರಮ ತೆಗೆದುಕೊಂಡರೂ ದೇಶ ಪ್ರತಿಯೊಬ್ಬ ನಾಗರಿಕರ ಸಹಕಾರವಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ತಿಳಿಸಿದರು.

ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಹಿಂದು, ಮುಸ್ಲಿಂ, ಸಿಖ್ ಸೇರಿ 140 ಕೋಟಿ ಜನರ ಬೆಂಬಲವಿದೆ. ಈ ವಿಚಾರದಲ್ಲಿ ರಾಜಕಾರಣ ಮಾಡುವುದಿಲ್ಲ. ಅವರ ನಿರ್ಧಾರಕ್ಕೆ ನಾವು ಬದ್ಧ. ಪಾಕಿಸ್ತಾನವನ್ನು ಮುಗಿಸಬೇಕು. ಅದರ ಮೇಲೆ ದಾಳಿ ಹಾಗೂ ದ್ವಂಸ ಮಾಡಿದರೂ ಅದಕ್ಕೆ ನಮ್ಮ ಬೆಂಬಲವಿದೆ ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಯುದ್ಧ ಮಾಡಬೇಡ ಎಂಬ ಹೇಳಿಕೆ ದಾಟಿ ಸರಿಯಾಗಿ ಅರ್ಥ ಮಾಡಿಕೊಳ್ಳಬೇಕು. ಕೇಂದ್ರ ಕೈಗಾರಿಕ ಸಚಿವ ಪಿಯೂಷ್ ಗೋಯಲ್ ಹಾಗೂ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರ ಹೇಳಿಕೆ ಬಗ್ಗೆ ಯಾಕೆ ಪ್ರಶ್ನೆ ಮಾಡುವುದಿಲ್ಲ. ಸಿಎಂ ಹೇಳಿರುವ ದಾಟಿ ಎಲ್ಲರಿಗೂ ಅರ್ಥವಾಗಿದೆ. 78 ವರ್ಷದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಇಡೀ ದೇಶ ಬಗ್ಗೆ ಅಪಾರ ಜ್ಞಾನವಿದೆ. ಪ್ರಜ್ಞಾವಂತ ರಾಜಕಾರಣಿಯಾಗಿರುವ ಅವರು ಯಾವ ದೃಷ್ಟಿಯಿಂದ ಹೇಳಿದ್ದಾರೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net