ಹೊಸ ಶಿಕ್ಷಣ ನೀತಿ ಜಾರಿಗೆ ಸಹಕರಿಸಿ

20MDG1
Published on

ಮುಂಡರಗಿ: ಇಡೀ ಜಗತ್ತಿನಲ್ಲೇ ಜ್ಞಾನ ಮತ್ತು ಕೌಶಲದೊಳಗೆ ಭಾರತ ನಂ. 1 ರಾಷ್ಟ್ರವಾಗಬೇಕೆಂಬ ಕನಸು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರದಾಗಿದೆ. ಹೀಗಾಗಿ ದೇಶದಲ್ಲಿ ಹೊಸ ಶಿಕ್ಷಣ ನೀತಿ ಜಾರಿಗೊಳಿಸಲಾಗುತ್ತಿದ್ದು, ಎಲ್ಲರೂ ಸಹಕಾರ ನೀಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ ಹೇಳಿದರು.

ಪಟ್ಟಣದ ಜಗದ್ಗುರು ತೋಂಟದಾರ್ಯ ಪ್ರಥಮ ದರ್ಜೆ ಕಾಲೇಜ್​ನಲ್ಲಿ ಬುಧವಾರ ನೂತನ ಹೆಚ್ಚುವರಿ ತರಗತಿ ಕೊಠಡಿಗಳು ಹಾಗೂ ಎಸ್ಸಿ, ಎಸ್ಟಿ ಬಾಲಕರ ವಿದ್ಯಾರ್ಥಿ ನಿಲಯ ಉದ್ಘಾಟಿಸಿ ಅವರು ಮಾತನಾಡಿದರು. ಕೇಂದ್ರ ಸರ್ಕಾರವು ದೇಶ ಮತ್ತು ವಿದ್ಯಾರ್ಥಿಗಳ ಉತ್ತಮ ಭವಿಷ್ಯ ನಿರ್ವಣಕ್ಕಾಗಿ ಹೊಸ ಶಿಕ್ಷಣ ನೀತಿ ಜಾರಿಗೊಳಿಸುತ್ತಿದೆ. 3 ವರ್ಷಗಳ ಕಾಲ ಸಮಗ್ರ ಅಧ್ಯಯನ ಮಾಡಲಾಗಿದ್ದು, ರಾಜ್ಯದಿಂದಲೇ ಮೊದಲು ಪ್ರಾರಂಭಿಸುವುದಕ್ಕೂ ಸರ್ಕಾರ ನಿರ್ಧರಿಸಿದೆ. ರಾಜ್ಯದಲ್ಲಿನ ಪದವಿ ಹಾಗೂ ಪದವಿಪೂರ್ವ ಕಾಲೇಜ್​ಗಳಿಗೆ ಅತಿಥಿ ಉಪನ್ಯಾಸಕರ ನೇಮಕಾತಿ ಪ್ರಕ್ರಿಯೆ ಸದ್ಯದಲ್ಲೇ ನಡೆಯಲಿದೆ ಎಂದರು.

ಶಾಸಕ ರಾಮಣ್ಣ ಲಮಾಣಿ ಮಾತನಾಡಿ, ಕಾಲೇಜ್​ಗೆ ಅವಶ್ಯವಿದ್ದ ಹೆಚ್ಚುವರಿ ಕೊಠಡಿ ನಿರ್ವಿುಸಲಾಗಿದೆ. ಕಾಲೇಜಿಗೆ ಬೇಕಾಗಿರುವ ಡೆಸ್ಕ್, ಪುಸ್ತಕಗಳ ಪೂರೈಕೆ ಹಾಗೂ ಶುದ್ಧ ನೀರಿನ ಘಟಕ ನಿರ್ವಿುಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಸಾನ್ನಿಧ್ಯ ವಹಿಸಿದ್ದ ಡಾ. ತೋಂಟದ ಸಿದ್ಧರಾಮ ಸ್ವಾಮೀಜಿ ಮಾತನಾಡಿ, ಜ್ಞಾನ ಮತ್ತು ಕ್ರಿಯೆ ಇವೆರಡೂ ವ್ಯಕ್ತಿತ್ವವನ್ನು ರೂಪಿಸುವಂತಹ ಶಕ್ತಿ. ವಿದ್ಯಾರ್ಥಿಗಳು ಪರಿಶ್ರಮ ವಹಿಸಿ ಅಧ್ಯಯನ ಮಾಡಿದಾಗ ಮಾತ್ರ ಯಶಸ್ಸು ದೊರೆಯುತ್ತದೆ ಎಂದರು.

ಜಿಪಂ ಸದಸ್ಯೆ ಶೋಭಾ ಮೇಟಿ, ಪುರಸಭೆ ಅಧ್ಯಕ್ಷೆ ಕವಿತಾ ಉಳ್ಳಾಗಡ್ಡಿ ಮಾತನಾಡಿದರು. ತಹಸೀಲ್ದಾರ್ ಆಶಪ್ಪ ಪೂಜಾರಿ, ಕಾಲೇಜ್ ಅಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ ಶ್ರೀನಿವಾಸ ಉಪ್ಪಿನಬೆಟಗೇರಿ, ಹೇಮಗಿರೀಶ ಹಾವಿನಾಳ, ರವೀಂದ್ರ ಉಪ್ಪಿನಬೆಟಗೇರಿ, ಎ.ಕೆ. ಬೆಲ್ಲದ, ಎಸ್.ವಿ. ಪಾಟೀಲ, ಭೀಮಸಿಂಗ್ ರಾಠೋಡ, ದೇವಪ್ಪ ಕಂಬಳಿ, ಲಿಂಗರಾಜಗೌಡ ಪಾಟೀಲ, ಎಸ್.ಆರ್. ಚಿಗರಿ, ನಾಗೇಶ ಹುಬ್ಬಳ್ಳಿ, ಆರ್.ಎಲ್. ಪೊಲೀಸ್​ಪಾಟೀಲ, ಎಂ.ಜಿ. ಗಚ್ಚಣ್ಣವರ, ಪ್ರಶಾಂತ ಗುಡದಪ್ಪನವರ, ಶಿವು ನಾಡಗೌಡ್ರ, ಮಹಾಂತೇಶ ಕೊರಡಕೇರಿ,ಪ್ರಕಾಶಗೌಡ ಪಾಟೀಲ, ಉದಯಕುಮಾರ ಎಲಿವಾಳ, ಯಲ್ಲಪ್ಪ ಕುಕನೂರ ಇತರರಿದ್ದರು. ಉಪನ್ಯಾಸಕ ಡಾ. ನಾಗರಾಜ ಹಾವಿನಾಳ ಸ್ವಾಗತಿಸಿದರು. ಉಪನ್ಯಾಸಕಿ ಬಿ. ಕಾವೇರಿ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net