ಮಾವು, ಟೊಮ್ಯಾಟೊಗೆ ಬೆಂಬಲ ಬೆಲೆ ನಿಗದಿಗೆ ಪಟ್ಟು

mango 111
Published on

ಕೋಲಾರ:, ಬೆಲೆ ಕುಸಿತದಿಂದ ಸಂಕಷ್ಟಕ್ಕೆ ಒಳಗಾಗಿರುವ ಜಿಲ್ಲೆಯ ಮಾವು ಮತ್ತು ಟೊಮ್ಯಾಟೊ ಬೆಳೆಗಾರರ ನೆರವಿಗೆ ಸರ್ಕಾರ ಧಾವಿಸಿ, ಕೂಡಲೇ ಬೆಂಬಲ ಬೆಲೆ ನಿಗದಿಪಡಿಸಬೇಕು ಎಂದು ಒತ್ತಾಯಿಸಿ, ರಾಜ್ಯ ರೈತ ಸಂ ಹಾಗೂ ಹಸಿರು ಸೇನೆ ಕಾರ್ಯಕರ್ತರು ತಾಲೂಕಿನ ರೋಜರನಹಳ್ಳಿ ಗೇಟ್​ನಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು.

ತರಕಾರಿ ಸಮೇತ ಗೇಟ್​ನಲ್ಲಿ ಜಮಾಯಿಸಿದ ರೈತರು, ರೈತ ಸಂದ ಕಾರ್ಯಕರ್ತರು ರಸ್ತೆ ತಡೆದು ಸರ್ಕಾರದ ವಿರುದ್ಧ ಘೋಷಣೆ ಕೂಗಿ, ಬೆಲೆ ನಿಗದಿಗೆ ಆಗ್ರಹಿಸಿದರು.

ಸಂದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಮಾತನಾಡಿ, ರೈತರನ್ನು ಸಂಕಷ್ಟದಿಂದ ಪಾರು ಮಾಡಲು ಆಗದಿದ್ದರೆ ಅಧಿಕಾರದಿಂದ ಕೆಳಗಿಳಿಯಬೇಕು. ರೈತರು ರೊಚ್ಚಿಗೇಳುವ ಮುನ್ನವೇ ನಿರ್ಧಾರ ಕೈಗೊಳ್ಳಿ. ಇಲ್ಲದಿದ್ದರೆ ಅಧಿಕಾರದಿಂದ ರೈತರೆ ಕೆಳಗಿಳಿಸುವುದು ಗ್ಯಾರಂಟಿ ಎಂದು ಎಚ್ಚರಿಸಿದರು.

ಪ್ರತಿ ಕೆಜಿಗೆ 15 ರೂ. ಬೆಂಬಲ ಬೆಲೆ ಘೋಷಣೆ ಮಾಡಬೇಕು. ಈ ನಿರ್ಧಾರವನ್ನು 24 ತಾಸಿನಲ್ಲಿ ಕೈಗೊಳ್ಳಬೇಕು. ರೈತರ ರಕ್ಷಣೆ ಮಾಡದಿದ್ದರೆ ಬೆಂಗಳೂರಿಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ, ರಾಜ್ಯ ಹೆದ್ದಾರಿಗಳನ್ನು ಬಂದ್​ ಮಾಡುವ ಜತೆಗೆ ಕೋಲಾರ ಜಿಲ್ಲೆಯ ಹಾಲು, ತರಕಾರಿ ರಾಜಕಾರಣಿಗಳ ಮನೆಗಳಿಗೆ ಸರಬರಾಜು ಆಗದಂತೆ ಸ್ಥಗಿತಗೊಳಿಸಲಾಗುತ್ತದೆ ಎಂದರು.

ರಾಜ್ಯ ಮುಖಂಡ ಬಂಗವಾದಿ ನಾಗರಾಜ್​ಗೌಡ ಮಾತನಾಡಿ, ಜಿಲ್ಲೆಯ ಉಸ್ತುವಾರಿ ಸಚಿವರು ಮಾವು, ಟೊಮ್ಯಾಟೊ ಬೆಳೆಗಾರರ ಸಮಸ್ಯೆಗೆ ಸ್ಪಂದಿಸುತ್ತಾರೆ ಎಂಬ ನೀರೀಕ್ಷೆಯಿತ್ತು. ರೈತರಿಗೆ ನಿರಾಸೆ ಮೂಡಿಸಿರುವ ಉಸ್ತುವಾರಿ ಸಚಿವರೇ ಬೆಂಬಲ ಬೆಲೆ ಘೋಷಣೆ ಮಾಡದೇ ಕೋಲಾರ ಜಿಲ್ಲೆಗೆ ಕಾಲಿಟ್ಟರೆ ಎಲ್ಲ ಕಾರ್ಯಕ್ರಮಗಳಲ್ಲಿ "ಗೋಬ್ಯಾಕ್​ ರೈತ ವಿರೋಧಿ ಸಚಿವರೇ' ಎಂಬ ಹೋರಾಟ ಕೈಗೆತ್ತಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.

ಜಿಲ್ಲೆಯ ರೈತರು ಕಾಂಗ್ರೆಸ್​ ಸರ್ಕಾರಕ್ಕೆ ಏನು ದ್ರೋಹ ಮಾಡಿದ್ದಾರೆ ? ಸೌಜನ್ಯಕ್ಕಾದರೂ ಮಾವು, ಟೊಮ್ಯಾಟೊ ಬೆಳೆಗಾರರ ಸಮಸ್ಯೆ ಆಲಿಸುತ್ತಿಲ್ಲ. ನೀವು ಕಿವುಡರಾ?, ಕುರುಡರಾ? ಇಲ್ಲವೇ ಮಾತು ಬಾರದ ಮೂಗರಾ? ಎಂದು ಕಿಡಿಕಾರಿದರು.

ಸದಸ್ಯರಾದ ನಾಗರಾಜ, ಗೋವಿಂದಪ್ಪ, ಮುನಿರಾಜು, ಶೈಲಜ, ಶೋಭಾ, ರತ್ನಮ್ಮ, ಚೌಡಮ್ಮ, ಸುಗುಣ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net